Home ಧಾರ್ಮಿಕ ಸುದ್ದಿ ಚೇವಾರು ಚನ್ನಿಕುಡಾಲು ಮಡಿವಾಳಗದ್ದೆ ಬ್ರಹ್ಮಕಲಶೋತ್ಸವ ಸಂಪನ್ನ

ಚೇವಾರು ಚನ್ನಿಕುಡಾಲು ಮಡಿವಾಳಗದ್ದೆ ಬ್ರಹ್ಮಕಲಶೋತ್ಸವ ಸಂಪನ್ನ

1796
0
SHARE

ಕುಂಬಳೆ : ಮಡಿವಾಳ ಸಾಲಿಯಾನ್‌ ಕುಟುಂಬ ತರವಾಡು ಕುಡಾಲು ಮೇರ್ಕಳ ಗ್ರಾಮದ ಚೇವಾರು ಚನ್ನಿಕುಡಾಲು ಮಡಿವಾಳಗದ್ದೆ ಮೂಲ ಶ್ರೀ ನಾಗದೇವರ ಸನ್ನಿಧಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಡಿ.29 ಮತ್ತು 30 ರಂದು ಬ್ರಹ್ಮಶ್ರೀ ಉರ್ಮಿ ವಾಸುದೇವ ನಲ್ಲೂರಾಯ ತಂತ್ರಿವರ್ಯರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಡಿ.29 ರಂದು ಸಂಜೆ ಆಚಾರ್ಯವರಣ ಮತ್ತು ವೈದಿಕರ ಆಗಮನ, ಪುಣ್ಯಾಹ ವಾಚನ, ಖನನಾದಿ ಸಪ್ತಶುದ್ಧಿ, ಪ್ರಾಸಾದ ಶುದ್ಧಿ ,ರಕೋÒಘ್ನ ಹೋಮ, ವಾಸ್ತುಪೂಜೆ, ವಾಸ್ತು ಬಲಿ, ನಾಗಬಿಂಬಗಳ ಅಧಿವಾಸ.

ಡಿ.30ರಂದು ಬೆಳಗ್ಗೆ ಗಣಪತಿ ಹೋಮ, ಕಲಶಪೂರಣ ಹೋಮ, ಪೂಜ್ಯಪೈವಳಿಕೆ ಚಾವಡಿ ಅರಮನೆಯ ಶ್ರೀ ರಂಗತೈÅಅರಸರ ಆಗಮನ, ಪೂರ್ಣಕುಂಭ ಸ್ವಾಗತ, ಶ್ರೀ ಅರಸರ ಉಪಸ್ಥಿ ತಿಯಲ್ಲಿ ಕುಂಭ ಲಘ್ನ ಮುಹೂರ್ತ ದಲ್ಲಿ ನೂತನ ಚಿತ್ರಕೂಟದಲ್ಲಿ ಶ್ರೀನಾಗಬ್ರಹ್ಮ,ನಾಗರಾಜ,ನಾಗಕನ್ನಿಕಾ ಶಕ್ತಿಗಳ ಬಿಂಬ ಪ್ರತಿಷ್ಠೆ, ವಟು ಆರಾಧನೆ,
ಬ್ರಹ್ಮಕಲಶಾಭಿಷೇಕ ನಡೆಯಿತು. ಆಶೇÉಷ ಬಲಿಯ ಬಳಿಕ ತಂಬಿಲ, ಮಹಾಪೂಜೆ, ನಿತ್ಯ ನೈಮಿತ್ತಿಕ ನಿರ್ಣಯ,ಪ್ರಸಾದ ವಿತರಣೆ ನಡೆದು ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here