ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿ ಕಿದ್ಮತುಲ್ ಇಸ್ಲಾಮ್ ಜಮಾಅತ್ ಕಮಿಟಿಯ ವತಿಯಿಂದ ಮಾಸಿಕ ಮಹ ರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮವು ಅಸ್ಸಯ್ಯಿದ್ ಹಂಝ ತಂಙಳ್ ಪಾಟ್ರಕೋಡಿ ಅವರ ನೇತೃತ್ವದಲ್ಲಿ ಜರಗಿತು.
ಜಮಾಅತ್ ಕಮಿಟಿ ಅಧ್ಯಕ್ಷ ಕರೀಮ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಅಬ್ದುಲ್ಲ ಅಹÕನಿ ಉದೊ½àಧನೆ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಜಮಾಅತ್ ಸದಸ್ಯರ ಪೈಕಿ ಜಿಸಿಸಿ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಯಕರ್ತರ ವಿಂಗ್ ರಚಿಸುವ ಸದಸ್ಯತ್ವವನ್ನು ಉದ್ಘಾಟಿ ಸಲಾಯಿತು. ಆಲಿಕುಞಿ ಹಾಜಿ ಬಹ್ರೈನ್ ಅವರು ಅಧ್ಯಕ್ಷರಿಗೆ ಕೊಡುವುದರ ಮೂಲಕ ಚಾಲನೆ ನೀಡಲಾಯಿತು.
ಮುದರ್ರಿಸ್ ಅಲ್ ಹಾಫಿಳ್ ಸಅದ್ ಹಿಮಮಿ ಸಖಾಫಿ, ಇಕ್ಬಾಲ್ ಮದನಿ, ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಬಿ. ಕೋಶಾಧಿ ಕಾರಿ ಮಾಮು ಹಾಜಿ, ಮುಹಮ್ಮದ್ ರಿಯಾ ಝ್ ಬೆಂಗಳೂರು, ಪುತ್ತುಞಿ ಹಾಜಿ, ಮಮುಂ¾ಞಿ ಹಾಜಿ, ಆಲಿಕುಞಿ ಹಾಜಿ, ಸಿ.ಪಿ. ಅಬ್ದುಲ್ಲ, ಹಮೀದ್ ಎ.ಪಿ. ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬ್ದುಲ್ ಅಝೀಝ್ ಸ್ವಾಗತಿಸಿ, ವಂದಿಸಿದರು.