Home ಧಾರ್ಮಿಕ ಸುದ್ದಿ ಮುಂಡಾಜೆ ಸನ್ಯಾಸಿಕಟ್ಟೆ: ಚಪ್ಪರ ಮುಹೂರ್ತ

ಮುಂಡಾಜೆ ಸನ್ಯಾಸಿಕಟ್ಟೆ: ಚಪ್ಪರ ಮುಹೂರ್ತ

1088
0
SHARE

ಬೆಳ್ತಂಗಡಿ : ಮುಂಡಾಜೆ ಭಾರ್ಗವ ನಗರದ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ಎ.18 ರಿಂದ 20ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆ ಯಲಿದ್ದು ಇದರ ಪೂರ್ವಭಾವಿಯಾಗಿ ರವಿವಾರ ದೇವಸ್ಥಾನದ ವಠಾರದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಿವೃತ್ತ ಮೇ| ಜ| ಎಂ.ವಿ. ಭಟ್‌, ದೇವಸ್ಥಾನದ ಆಡಳಿತ ಮೊಕ್ತೇಸರ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ವೆಂಕಟ್ರಾಯ ಅಡೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌.ಎಸ್‌. ಗೋಖಲೆ, ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷರಾದ ರಾಮಣ್ಣ ಶೆಟ್ಟಿ ಅಗರಿ, ಗೋಪಾಲಕೃಷ್ಣ ಜೋಶಿ ಕಾಂತ್ಲ, ಅನಂತ ಭಟ್‌ ಮಚ್ಚಿಮಲೆ, ಬ್ರಹ್ಮಕಲಶ ಸಮಿತಿ ಜತೆ ಕಾರ್ಯದರ್ಶಿ ಬಾಬು ಪೂಜಾರಿ ಕೂಳೂರು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸಂಜೀವ ಶೆಟ್ಟಿ ಮುಂಡ್ರುಪ್ಪಾಡಿ, ಕಾರ್ಯದರ್ಶಿ ಸದಾನಂದ ಬಿ., ಚಪ್ಪರ ಸಮಿತಿಯ ಸದಾಶಿವ ನೇಕಾರ, ಮಧು ಶೆಟ್ಟಿ, ಕೊರಗಪ್ಪ ನಾಯ್ಕ, ವಿಶ್ವನಾಥ ಲೋಂಡೆ, ರಾಮಚಂದ್ರ ಭಟ್‌ ಅರೆಕ್ಕಲ್‌, ನಾರಾಯಣ ಫಡೆR, ಅರ್ಚಕ ರವಿಕಿರಣ್‌ ಮರಾಠೆ, ಸುರೇಶ್‌ ಪ್ರಭು, ವಿಶ್ವನಾಥ ಶೆಟ್ಟಿ, ಜಯಚಂದ್ರ, ನಾಮದೇವ್‌ ರಾವ್‌, ಜಯಂತಿ ಶೆಟ್ಟಿ, ವಿದ್ಯಾ ಬೆಂಡೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here