Home ಧಾರ್ಮಿಕ ಸುದ್ದಿ ಚಂದ್ರಮಂಡಲ ರಥದ ಮೆರವಣಿಗೆ

ಚಂದ್ರಮಂಡಲ ರಥದ ಮೆರವಣಿಗೆ

1867
0
SHARE

ಪುತ್ತೂರು: ಚಾರ್ವಾಕ ಗ್ರಾಮದ ಶ್ರೀ ಕಪಿಲೇಶ್ವರ ದೇವಾ ಲಯಕ್ಕೆ ಸಮರ್ಪಣೆ ಗೊಳ್ಳಲಿರುವ ಚಂದ್ರಮಂಡಲ ರಥದ ಮೆರವಣಿಗೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲ ಯದ ಮುಂಭಾಗದಲ್ಲಿ ರವಿವಾರ ಚಾಲನೆ ನೀಡಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ತೆಂಗಿನ ಕಾಯಿ ಒಡೆಯುವ ಮೂಲಕ ರಥದ ಮೆರವಣಿಗೆಗೆ ಚಾಲನೆ ನೀಡಿದರು. ದೇವಾಲಯದ ಪ್ರಧಾನ ಅರ್ಚಕ ವೇ| ಮೂ| ವಸಂತ ಕೆದಿಲಾಯ ಪೂಜಾ ಕಾರ್ಯ ನೆರವೇರಿಸಿದರು.

ಆರಂಭದಲ್ಲಿ ಚಂದ್ರಮಂಡಲ ರಥದ ದಾನಿಯಾದ ಕಪಿಲೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯ ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಮತ್ತು ಡಾ| ಆಶಾ ಅಭಿಕಾರ್‌ ದಂಪತಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಚಂದ್ರಮಂಡಲ ರಥ ಮೆರವಣಿಗೆಯ ಸಂದರ್ಭದಲ್ಲಿ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ ಮತ್ತು ಸಮಿತಿ ಸದಸ್ಯರು, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಂಜೀವ ನಾಯಕ್‌, ಯು.ಪಿ. ರಾಮಕೃಷ್ಣ, ನ್ಯಾಯವಾದಿ ಚಿದಾನಂದ ಬೈಲಾಡಿ, ವೆಂಕಪ್ಪ ಗೌಡ, ಚಂದ್ರಶೇಖರ ರಾವ್‌ ಬಪ್ಪಳಿಗೆ, ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಶಿವರಾಮ ಎಚ್‌.ಎಸ್‌., ಅಮರ ಕಾಸ್ಪಾಡಿ ದೈವಸ್ಥಾನದ ಅಧ್ಯಕ್ಷ ಕುಸುಮಾಧರ ರೈ, ಮೋನಪ್ಪ ಗೌಡ, ನಗರಸಭಾ ಸದಸ್ಯೆ ಗೌರಿ ಬನ್ನೂರು ಉಪಸ್ಥಿತರಿದ್ದರು. ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್‌ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.

ಆಕರ್ಷಕ ಮೆರವಣಿಗೆ
ಚಂದ್ರಮಂಡಲ ರಥವನ್ನು ಲಾರಿ ಮೇಲಿರಿಸಿ ವಾಹನಗಳ ಮೆರವಣಿಗೆಯಲ್ಲಿ ಒಯ್ಯಲಾಯಿತು. ಪುರುಷರಕಟ್ಟೆ, ಸವಣೂರು, ಕಾಣಿಯೂರು ಮೂಲಕ ಚಾರ್ವಾಕ ದೇವಾಲಯಕ್ಕೆ ತಲುಪಿತು. ಕಾಣಿಯೂರಿನಿಂದ ಕಪಿಲೇಶ್ವರ ಕ್ಷೇತ್ರಕ್ಕೆ ರವಿವಾರ ಸಂಜೆ ಭವ್ಯ ಮೆರವಣಿಗೆಯಲ್ಲಿ ಚಂದ್ರಮಂಡಲ ರಥ ಒಯ್ಯಲಾಯಿತು.

ಶ್ರೀ ಕಪಿಲೇಶ್ವರ ದೇವಾಲಯದ ಜಾತ್ರೆ ಜ. 17ರಿಂದ ಆರಂಭಗೊಳ್ಳಲಿದೆ. ಜ. 19ರ ರಾತ್ರಿ ದೇವರ ದರ್ಶನಬಲಿ ಉತ್ಸವದ ಬಳಿಕ ಚಂದ್ರಮಂಡಲ ರಥ ಸಮರ್ಪಣೆ ಆಗಲಿದೆ. ರಾತ್ರಿ ಪ್ರಥಮ ಚಂದ್ರಮಂಡಲ ರಥೋತ್ಸವ ದೇವಾಲಯದ ಹೊರಾಂಗಣದಲ್ಲಿ ನಡೆಯಲಿದೆ. 17 ಲಕ್ಷ ರೂ. ವೆಚ್ಚದಲ್ಲಿ ರಥವನ್ನು ನಿರ್ಮಿಸಲಾಗಿದೆ.

LEAVE A REPLY

Please enter your comment!
Please enter your name here