ಬೆಳ್ತಂಗಡಿ : ಲಾೖಲ ಗ್ರಾಮದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು, ಮೇ 8ರಿಂದ 13ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಚಪ್ಪರ ಮುಹೂರ್ತ ನೆರವೇರಿತು.
ಧರ್ಮಸ್ಥಳ ಕ್ಷೇತ್ರದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಚಪ್ಪರ ಮುಹೂರ್ತ ನಡೆಸಿ, ಶುಭ ಹಾರೈಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಐತಾಳ ಪಂಜಿರ್ಪು ಅವರು ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಎನ್. ಧನಂಜಯ ಅಜ್ರಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ. ವಿಟuಲ ಶೆಟ್ಟಿ, ಬಿ.ಕೆ. ಧನಂಜಯ ರಾವ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಡೋಂಗ್ರೆ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಯೋಗೀಶ್ ಆರ್. ಭಿಡೆ, ಕಾರ್ಯದರ್ಶಿ ಶೂಲಪಾಣಿ ಚಂದ್ಕೂರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ವಸಂತ ಸುವರ್ಣ, ರಾಜೇಶ್ ಶೆಟ್ಟಿ, ಚಪ್ಪರ ಸಮಿತಿ ಸಂಚಾಲಕ ದಯಾನಂದ ಸಾಲ್ಯಾನ್, ಜಯಾನಂದ ಲಾೖಲ, ವಸಂತ ಶೆಟ್ಟಿ, ಸುರೇಶ್ ಶೆಟ್ಟಿ ಲಾೖಲ, ಆನಂದ ಶೆಟ್ಟಿ ಮತ್ತಿತರರಿದ್ದರು.