ಕಟಪಾಡಿ: ಏಣಗುಡ್ಡೆ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರೀ ದೇವರ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಚಂಡಿಕಾಯಾಗ ಪೂರ್ಣಾ ಹುತಿಯು
ಶುಕ್ರವಾರ ಜರಗಿತು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆಯೂ ಜರಗಿದ್ದು, ಸುಮಾರು ನಾಲ್ಕು ಸಾವಿರ ಭಕ್ತಾದಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದರು. ನವರಾತ್ರಿ ಮಹೋತ್ಸವವು ಅ.10ರಿಂದ ಆರಂಭಗೊಂಡಿದ್ದು, ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.18ರ ಪರ್ಯಂತ ಜರಗಲಿದೆ.
ಈ ಸಂದರ್ಭ ಆಡಳಿತ ಮೊಕ್ತೇಸರ ಏಣಗುಡ್ಡೆ ಹೊಸಮನೆ ವೈ. ಭರತ್ ಹೆಗ್ಡೆ, ವೇ|ಮೂ| ಪಾಡಿಗಾರು ವಾಸುದೇವ ತಂತ್ರಿ, ವೈ. ವಾದಿರಾಜ ಭಟ್ ಆಡಳಿತ ಮಂಡಳಿಯ ವೈ. ಆರ್. ಹೆಗ್ಡೆ, ಲೀಲಾ ಎನ್ ಶೆಟ್ಟಿ, ಪುಷ್ಪಲತಾ ಆರ್ ಭಟ್, ಚಂದ್ರಶೇಖರ್ ಕಾಂಚನ್, ಗಿರೀಶ್ ಎಂ. ಅಂಚನ್, ನಾರಾಯಣ ಪೂಜಾರಿ, ವೈ. ಅಶೋಕ್, ಮೊಕ್ತೇಸರರು, ದೇವಸ್ಥಾನದ ಅರ್ಚಕರು, ಸಿಬಂದಿ ವರ್ಗ, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.