Home ಧಾರ್ಮಿಕ ಸುದ್ದಿ ಚಂಡಿಕಾಹೋಮ, ಅನ್ನಸಂತರ್ಪಣೆ

ಚಂಡಿಕಾಹೋಮ, ಅನ್ನಸಂತರ್ಪಣೆ

2004
0
SHARE

ಮಲ್ಪೆ: ಬಡಾನಿಡಿಯೂರು ಸನ್ಯಾಸಿಮಠ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಅ. 10ರಿಂದ 18ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು ಬುಧವಾರ ದುರ್ಗಾಷ್ಟಮಿಯಂದು ಮಹಾ ಚಂಡಿಕಾಹೋಮ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಬಳಿಕ ಕುಕ್ಕುಡೆ ಸಪ್ತಸ್ವರ ಭಜನ್‌ ಸಂಗೀತ ಬಳಗ ಅವರಿಂದ ಭಜನಾ ಕಾರ್ಯಕ್ರಮ ಜರಗಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌, ದೇವಸ್ಥಾನದ ಅಧ್ಯಕ್ಷ ರಮೇಶ್‌ ಕೋಟ್ಯಾನ್‌, ಮಾಜಿ ಅಧ್ಯಕ್ಷ ಬಿ. ಕೇಶವ ರಾವ್‌, ದೇವಸ್ಥಾನದ ಸಮಿತಿಯ ಉಪಾಧ್ಯಕ್ಷ ಬಿ. ಪಿ. ರಮೇಶ್‌, ಕೋಶಾಧಿಕಾರಿ ಹರೀಶ್‌ ಶೆಟ್ಟಿ, ಮಾಜಿ ಕೋಶಾಧಿಕಾರಿ ಸುರೇಶ್‌ ಶೆಟ್ಟಿ, ಕಾರ್ಯದರ್ಶಿ ಸಚಿನ್‌ಕೋಟ್ಯಾನ್‌, ಅರ್ಚಕ ಪಾಂಡುರಂಗ ರಾವ್‌, ಪಾತ್ರಿ ಯಾದವ ರಾವ್‌, ಮೊಕೇ¤ಸರರಾದ ನಾರಾಯಣ ರಾವ್‌, ವಾಸುದೇವ ರಾವ್‌, ನಿರಂಜನ್‌ ರಾವ್‌, ಸದಾನಂದ ಶೆಟ್ಟಿ, ಸಂಜೀವ ಪಾಲನ್‌, ರಾಮ ಸುವರ್ಣ, ದಾಮೋದರ ಸಾಲ್ಯಾನ್‌, ಮಾತೃ ಮಂಡಳಿಯ ಅಧ್ಯಕ್ಷೆ ಗೀತಾ ರಾವ್‌, ಕಾರ್ಯದರ್ಶಿ ಸುಮ ಆಚಾರ್ಯ, ಬಡಾನಿಡಿಯೂರು ಗ್ರಾ. ಪಂ. ಅಧ್ಯಕ್ಷ ಉಮೇಶ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here