Home ಧಾರ್ಮಿಕ ಸುದ್ದಿ ಸಂಭ್ರಮದ ಬನಶಂಕರಿದೇವಿ ರಥೋತ್ಸವ

ಸಂಭ್ರಮದ ಬನಶಂಕರಿದೇವಿ ರಥೋತ್ಸವ

214
0
SHARE

ಬಾದಾಮಿ: ಸುಕ್ಷೇತ್ರ ಬಾದಾಮಿ-ಬನಶಂಕರಿ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಸಂಜೆ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು. ಸೋಮವಾರ ಬೆಳಗ್ಗೆ ಬನಶಂಕರಿ ದೇವಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕವನ್ನು ಅಶೋಕ ಭಟ್ಟ, ಶಂಕರ ಭಟ್ಟ ಪೂಜಾರ ಹಾಗೂ ಶಂಕರ ಭಟ್ಟ, ಗುಂಡಭಟ್ಟ ಪೂಜಾರ ನೆರವೇರಿಸಿದರು.

ಬನಶಂಕರಿ ಮಹಾರಥೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ರಥಾಂಗ ಹೋಮ ಹಾಗೂ ಪೂಜೆ ನೆರವೇರಿಸಿದ ನಂತರ ಮಾಡಲಗೇರಿಯಿಂದ ತಂದ ರಥದ ಹಗ್ಗದಿಂದ ರಥ ಎಳೆಯಲಾಯಿತು. ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಬನಶಂಕರಿದೇವಿ ನಿನ್ನ ಪಾದಕ ಶಂಭು ಕೋ ಎಂದು ಭಕ್ತರು ನಾಮಸ್ಮರಣೆ ಮಾಡಿದರು.

ಮಹಾರಥೋತ್ಸವಕ್ಕೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಚಾಲನೆ ನೀಡಿದರು. ಮಾಜಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಎಂ.ಕೆ. ಪಟ್ಟಣಶಟ್ಟಿ, ರವೀಂದ್ರ ಕಲಬುರ್ಗಿ, ತಹಶೀಲ್ದಾರ್‌ ಎಸ್‌.ಎಸ್‌. ಇಂಗಳೆ, ತಾಪಂ ಇಒ ಭೀಮಪ್ಪ ಲಾಳಿ, ಕುಮಾರಗೌಡ ಜನಾಲಿ, ಮಹಾಂತೇಶ ಮಮದಾಪುರ, ಕುಮಾರ ರೋಣದ, ಎಂ.ಬಿ. ಹಂಗರಗಿ, ಎಂ.ಎಚ್. ಚಲವಾದಿ, ಪಿ.ಆರ್‌. ಗೌಡರ, ಮಹೇಶ ಹೊಸಗೌಡರ, ಎಸ್‌.ವೈ. ಕುಳಗೇರಿ, ಎಂ.ಡಿ. ಯಲಿಗಾರ, ಭೀಮಸೇನ ಚಿಮ್ಮನಕಟ್ಟಿ, ಫಾರೂಖ ದೊಡಮನಿ, ಆರ್‌.ಎಫ್‌.ಬಾಗವಾನ, ಅಶೋಕ ಕೋಟನಕರ, ಎನ್‌.ಎಚ್.ಗುಡಿ, ಮುತ್ತಣ್ಣ ಕಳ್ಳಿಗುಡ್ಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳಿಂದ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here