Home ಧಾರ್ಮಿಕ ಸುದ್ದಿ ಸಂಭ್ರಮದ ವರಮಹಾಲಕ್ಷ್ಮೀಹಬ್ಬ

ಸಂಭ್ರಮದ ವರಮಹಾಲಕ್ಷ್ಮೀಹಬ್ಬ

368
0
SHARE

ಬೆಂಗಳೂರು: ನಗರದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸಿಲಿಕಾನ್‌ ಸಿಟಿಯ ಮನೆಗಳಲ್ಲಿ ಮಾವು-ಸೇಬು, ಮಲ್ಲಿಗೆ, ಸುಗಂಧ, ಕೇದಗೆಗಳಿಂದ ಅಲಕೃಂತಗೊಂಡಿದ್ದ ಲಕ್ಷ್ಮೀ ಶುಕ್ರವಾರ ಕಳೆಗಟ್ಟಿದಳು. ನಗರದ ಬಹುತೇಕ ದೇವಾಲಯಗಳಲ್ಲಿ ಧೈರ್ಯ ಲಕ್ಷ್ಮೀ , ಸಂತಾನ ಲಕ್ಷ್ಮೀ , ಧನಲಕ್ಷ್ಮೀ, ಧಾನ್ಯಲಕ್ಷ್ಮೀಯ ವಿವಿಧ ಅಲಂಕಾರಗಳಲ್ಲಿ ದೇವಿಯ ಮೂರ್ತಿಗಳು ಜನರಲ್ಲಿ ಭಕ್ತಿ ಮೂಡಿಸಿತ್ತು.

ಹಬ್ಬದ ಪ್ರಯುಕ್ತ ಮನೆಗಳಲ್ಲಿ ಕಳಸ ಪ್ರತಿಷ್ಠಾಪಿಸಿ ಲಕ್ಷ್ಮೀ ಮುಖವಾಡಗಳನ್ನು ಕಟ್ಟಿ , ತ್ರಾಮದ ಬಿಂದಿಗೆ ಇರಿಸಿ ಸೀರೆ ಉಡಿಸಿಲಾಯಿತು. ಕೆಲವು ಮನೆಗಳಲ್ಲಿ ಬೆಳ್ಳಿಯ ಲಕ್ಷ್ಮೀ ಮುಖವಾಡ ಕೊಬ್ಬರಿ ಅಥವಾ ತೆಂಗಿನಕಾಯಿಯಲ್ಲಿ ಅಥವಾ ಅರಿಶಿಣದಲ್ಲಿ ಮಾಡಿದ ಮುಖವಾಡಗಳನ್ನು ಕಳಸಕ್ಕೆ ಕಟ್ಟಿದ್ದರು. ಅದಕ್ಕೆ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡಲಾಗಿತ್ತು. ಕೆಲವು ಮನೆಗಳಲ್ಲಿ ವಿವಿಧ ನೋಟುಗಳಿಂದ ಶೃಂಗಾರಿಸಿದ್ದರು. ಅಲ್ಲದೆ ದೇವರಿಗೆ ವಿವಿಧ ಸಿಹಿ ಪದಾರ್ಥಗಳ ನೈವೇದ್ಯ ಸಮರ್ಪಿಸಿ ಭಕ್ತಿ ಭಾವದಿಂದ ಪೂಜಿಸಲಾಯಿತು. ಸಂಜೆ ವೇಳೆಗೆ ಶ್ಲೋಕ ಪಠಿಸಿ ಹಾಡು ಹಾಡಿ ಲಕ್ಷ್ಮೀಗೆ ಆರತಿ ಬೆಳಗಿದರು. ರೇಷ್ಮೆ ಸೀರೆ ಧರಿಸಿದ ಮುತ್ತೈದೆಯರು, ಬಣ್ಣ ಬಣ್ಣದ ಫ್ಯಾನ್ಸಿ ಡ್ರೆಸ್‌ ತೊಟ್ಟ ಯುವತಿಯರು, ಮಕ್ಕಳು ತಮ್ಮ ನೆರೆಹೊರೆಯವರ ಮನೆಗಳಿಗೆ ತೆರಳಿ ಲಕ್ಷ್ಮೀಗೆ ನಮಿಸಿದರು. ನಂತರ ಅರಿಶಿನ ಕುಂಕುಮ ಮತ್ತು ಬಾಗೀನ ಪಡೆದುಕೊಂಡು ಬಂದರು.

ದೇವಾಲಯಗಳಲ್ಲೂ ವಿಶೇಷ ಪೂಜೆ: ಗವಿಪುರದ ಅಂಬಾಭವಾನಿ ದೇವಸ್ಥಾನ, ಬಂಡೆಮಹಾಕಾಳಿ ದೇವಸ್ಥಾನ, ಚಾಮರಾಜಪೇಟೆಯ ಅಂಬಾ ಭವಾನಿ, ಹನುಮಂತನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ಪದ್ಮಾವತಿ, ಧರ್ಮರಾಯರಾಯಸ್ವಾಮಿ ದೇವಸ್ಥಾನದಲ್ಲಿ ದ್ರೌಪದಿ, ಬನಶಂಕರಿಯ ಬನಶಂಕರಮ್ಮ, ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಿ ದೇವಾಲಯಗಳಲ್ಲಿ ಲಕ್ಷ್ಮೀ , ಮಹಾಲಕ್ಷ್ಮೀ, ಗಜಲಕ್ಷ್ಮೀ, ಅಷ್ಟಲಕ್ಷ್ಮೀ ಹೀಗೆ ನಾನಾ ಲಕ್ಷ್ಮೀಯರ ಅಲಂಕಾರ ಮಾಡಲಾಗಿತ್ತು. ಅರಿಶಿನ ಕುಂಕುಮ ಅಲಂಕಾರ, ಧಾನ್ಯದ ಅಲಂಕಾರ, ಡ್ರೈಫ್ರೂಟ್ಸ್‌ ಅಲಂಕಾರ, ಹಣ್ಣಿನ ಅಲಂಕಾರ, ನೋಟು ಮತ್ತು ಕಾಸಿನ ಅಲಂಕಾರ ಹೀಗೆ ನಾನಾ ಅಲಂಕಾರಗಳನ್ನು ಮಾಡಲಾಗಿತ್ತು.

ಟಿ.ಆರ್‌. ಮಿಲ್‌ ಬಳಿಯಿರುವ ಲಕ್ಷ್ಮೀ ದೇವಸ್ಥಾನ, ಶ್ರೀನಗರದ ಲಕ್ಷ್ಮೀ ದೇವಸ್ಥಾನ, ದೇವಗಿರಿ ವೆಂಕಟರಮಣ ಲಕ್ಷ್ಮೀ ದೇವಸ್ಥಾನ, ಮಹಾಲಕ್ಷ್ಮಿ ಲೇಔಟ್‌ ಲಕ್ಷ್ಮೀ ದೇವಸ್ಥಾನ, ಶೇಷಾದ್ರಿಪುರಂನ ಮಹಾಲಕ್ಷ್ಮೀ ಮಂದಿರ, ಹೆಬ್ಟಾಳದ ಕೆಂಪಾಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಹೋಮ ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು.

ಲಕ್ಷ್ಮೀ ವಿಗ್ರಹಕ್ಕೆ ವಿಶೇಷ ಅಲಂಕಾರ: ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಪದ್ಮನಾಭನಗರ ಲಕ್ಷ್ಮೀಕಾಂತ ದೇವಸ್ಥಾನದಲ್ಲಿರುವ 8 ಅಡಿ ಎತ್ತರದ ಲಕ್ಷ್ಮೀ ವಿಗ್ರಹಕ್ಕೆ ಅಲಂಕಾರ ಮತ್ತು ಪೂಜೆ ನೆರವೇರಿಸಲಾಯಿತು. ಧನ್ವಂತರಿ ರಸ್ತೆಯ ಲಕ್ಷ್ಮೀ ಹಯಗ್ರೀವ ಸನ್ನಿ ಯಲ್ಲಿ ಪುಟಾಣಿ ಲಕ್ಷ್ಮೀ ವಿಗ್ರಹವಿದೆ. ಇದು ಪುಟಾಣಿಯಾದರೂ ಭಕ್ತರ ನಂಬಿಕೆ ದೊಡ್ಡದು. ಹೀಗಾಗಿ ಇಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ಸಾಲುಗಟ್ಟಿ ದೇವಿಗೆ ಭಕ್ತಿ ಸಮರ್ಪಿಸಿದರು.

LEAVE A REPLY

Please enter your comment!
Please enter your name here