Home ಧಾರ್ಮಿಕ ಸುದ್ದಿ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ : “ಕೃಷ್ಣನ ಕಾಲವನ್ನು ನೆನಪಿಸಿದ ಮೊಸರು ಕುಡಿಕೆ ಉತ್ಸವ’

ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ : “ಕೃಷ್ಣನ ಕಾಲವನ್ನು ನೆನಪಿಸಿದ ಮೊಸರು ಕುಡಿಕೆ ಉತ್ಸವ’

1895
0
SHARE

ಉಡುಪಿ : ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಮಾನವ ಪಿರಮಿಡ್‌ ಮೂಲಕ ಮಡಕೆ ಮೊಸರು ಕುಡಿಕೆ ಒಡೆಯುತ್ತಿದ್ದ. ಈಗ ಅದು ಮುಂಬೈಯ ಯುವ ಪ್ರೇರಣಾ ಮಂಡಳಿ ಮೂಲಕ ಪುನರಾವರ್ತನೆಯಾಗುತ್ತಿದೆ ಎಂದು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆರ್ಶೀವಚನ ನೀಡಿದರು.

ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀ ಕನಕ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ವಿಟ್ಲಪಿಂಡಿ ಪ್ರಯುಕ್ತ ಮಧ್ವಮಂಟಪದಲ್ಲಿ ಆಯೋಜಿಸಿದ್ದ ಆಲಾರೆ ಗೋವಿಂದ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ಕಾಳಿಂಗನ ಮರ್ದಿಸಿ ಅದರ ನೆತ್ತಿಯ ಮೇಲೆ ನೃತ್ಯ ಮಾಡಿದ ಜಗದೇಕ ನೃತ್ಯ ಗುರು ಶ್ರೀ ಕೃಷ್ಣ ಪರಮಾತ್ಮ. ಅವನು ಎಲ್ಲರಿಗೂ ಮಾದರಿ ಎಂದು ಆಶೀರ್ವಚನ ನೀಡಿದರು. ಶ್ರೀಗಳ ಸಮ್ಮುಖದಲ್ಲಿ ಮಾನವ ಪಿರಮಿಡ್‌ ನಿರ್ಮಿಸುವ ಮೂಲಕ 50 ಅಡಿ ಎತ್ತರದಲ್ಲಿ ಕಟ್ಟಿದ ಮೊಸರು ಕುಡಿಕೆ ಒಡೆಯುವ ಸಾಹಸವನ್ನು ಯುವಪ್ರೇರಣ ತಂಡ ನಡೆಸಿಕೊಟ್ಟಿತು.

ಕಿದಿಯೂರು ಹೋಟೆಲ್‌ನ ಭುವನೇಂದ್ರ ಕಿದಿಯೂರು, ಉದಯಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಉದಯಕುಮಾರ ಶೆಟ್ಟಿ, ಉದ್ಯಮಿ ವಿಠಲ ಪೈ, ಹರಿಯಪ್ಪ ಕೋಟ್ಯಾನ್‌, ಅಲಾರೆ ಗೋವಿಂದ ಕಾರ್ಯಕ್ರಮದ ಸಂಯೋಜಕ ಮಧುಸೂದನ್‌ ಪೂಜಾರಿ, ರಘುರಾಮ್‌ ಶೆಟ್ಟಿ, ಕಟೀಲು ದೇವಳದ ಅರ್ಚಕ ವಾಸುದೇವ ಅಸ್ರಣ್ಣ, ಎಲ್‌.ಸಿ ಪೂಜಾರಿ, ಯುವಪ್ರೇರಣ ಮಂಡಳಿ ಅಧ್ಯಕ್ಷ ರಾಜೇಶ್‌ ಶಾಂತಾರಾಮ್‌ ರಾಣೆ ಮೊದಲಾದವರು ಉಪಸ್ಥಿತರಿದ್ದರು. ನಗರದ ವಿವಿಧೆಡೆ ಈ ತಂಡ
ಆಕರ್ಷಕ ಮೊಸರು ಕುಡಿಕೆ ಕಾರ್ಯಕ್ರಮ ನಡೆಸಿತು.

ಶ್ರೀಕೃಷ್ಣಮಠದಲ್ಲಿ ಭಜನೆಯ ಜತೆ ಭೋಜನ
ಉಡುಪಿ, ಸೆ. 3: ಶ್ರೀ ಕೃಷ್ಣನ ನಾಮ ಸ್ಮರಣೆಯೊಂದಿಗೆ ಪ್ರಸಾದ ಸ್ವೀಕರಿಸುವ ಯೋಗ ಇಂದು ಲಭ್ಯವಾಗಿದೆ. ನಾಲಿಗೆಗೆ ಇಂದು ಭಕ್ತಿ ಪ್ರಸಾದದ ಯೋಗ ದೊರಕಿದೆ ಎಂದು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

ಅವರು ರಾಜಾಂಗಣದಲ್ಲಿ ಸೋಮವಾರ ನಡೆದ ಭಜನ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿ. ಬಾಯಿಯಲ್ಲಿ ಕೃಷ್ಣ ಪ್ರಸಾದ ಸ್ವೀಕರಿಸುತ್ತಾ ಇಂದ್ರಿಯಗಳಿಗೆ ಶ್ರೀಕೃಷ್ಣನ ಸ್ಪರ್ಶವು ಇಂದು ಸಿಕ್ಕಿದೆ. ಗೋಪಾಲಕನಾದ ಕೃಷ್ಣ ಗೋಪಾಲನಾದ. ಗೋಪಾಲನ ಪ್ರೀತಿಯ ಹಾಲಿನ ಪರಮಾನ್ನವನ್ನು ಇಂದು ಭಕ್ತಾದಿಗಳಿಗೆ ಉಣಬಡಿಸುತ್ತಿದ್ದೇವೆ ಎಂದು ಹೇಳಿದರು.

ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯತೀರ್ಥ ಶ್ರೀಪಾದರು ಶುಭಾಶಂಸನೆಗೈದರು. ಯತಿದ್ವಯರು ಭಕ್ತರಿಗೆ ಅನ್ನವನ್ನು ಬಡಿಸುವ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಇದೇ ಸಂದರ್ಭ ಗೋವುಗಳಿಗೆ ಗೋಗ್ರಾಸ ಸಮರ್ಪಿಸಿದರು. ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಭುವನೇಂದ್ರ ಕಿದಿಯೂರು, ಕಟಿಲು ದೇವಳದ ಅರ್ಚಕ ವಾಸುದೇವ ಅಸ್ರಣ್ಣ, ಹೀರಾ ಕಿದಿಯೂರು, ಜಿತೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್‌, ಮಧುಸೂದನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here