Home ಧಾರ್ಮಿಕ ಕ್ಷೇತ್ರಗಳು ಸುರಥ ಮಹಾರಾಜ ಕ್ಷೇತ್ರ ನಿರ್ಮಿಸಿದ ಕತೆ ಹೇಳುತ್ತಿವೆ ಕೆತ್ತನೆಗಳು

ಸುರಥ ಮಹಾರಾಜ ಕ್ಷೇತ್ರ ನಿರ್ಮಿಸಿದ ಕತೆ ಹೇಳುತ್ತಿವೆ ಕೆತ್ತನೆಗಳು

2945
0
SHARE

ಪೊಳಲಿ : ಪುರಾಣ ಪ್ರಸಿದ್ಧ ಪೊಳಲಿ ಕ್ಷೇತ್ರವನ್ನು ಸುರಥ ಮಹಾರಾಜ ನಿರ್ಮಾಣ ಮಾಡಿದ್ದಾನೆ ಎಂದು ಇತಿಹಾಸ ಹೇಳುತ್ತಿದ್ದು, ಆತ ಕ್ಷೇತ್ರವನ್ನು ಹೇಗೆ ನಿರ್ಮಾಣ ಮಾಡಿದ್ದಾನೆ ಎಂಬ ಕತೆಯನ್ನು ನೂತನ ಕ್ಷೇತ್ರದ ಕೆತ್ತನೆಯಲ್ಲಿ ಕಾಣಬಹುದಾಗಿದೆ. ಕ್ಷೇತ್ರದ ಗರ್ಭ ಗೃಹದ ಹೊರಭಾಗದ ಮರದ ದಳಿಯ ಕೆತ್ತನೆಗಳನ್ನು ಗಮನಿಸಿದಾಗ ಈ ವಿನೂತನ ಶಿಲ್ಪಕಲೆಯ ಅರಿವಾಗುತ್ತದೆ.

ದಂಡಯಾತ್ರೆಯಲ್ಲಿ ಸೋತ ಸುರಥ ಮಹಾರಾಜನು ಪೊಳಲಿ ಪರಿಸರದಲ್ಲಿ ಮಲಗಿರುವ ಸಂದರ್ಭ ಆತನಿಗೆ ಕನಸು ಬಿದ್ದು, ಕಡುಶರ್ಕರಾದಿ ಮೃಣ್ಮಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡು ವಂತೆ ಆದೇಶ ವಾಗುತ್ತದೆ. ಅದರಂತೆ ಸುರಥ ಮಹಾ ರಾಜ ದೇಗುಲ ನಿರ್ಮಿಸು ತ್ತಾನೆ. ಅದು ಹೇಗಾಯಿತು, ಆತ ಕಲ್ಲನ್ನು ಎಲ್ಲಿಂದ ತಂದಿ ದ್ದಾನೆ, ಶಿಲ್ಪಿಗಳನ್ನು ಆತನ ಊರಿಂದ ಕರೆದುಕೊಂಡು ಬಂದ, ಶೂಲ ಪ್ರತಿಷ್ಠೆ ಮಾಡಿದ ಹೀಗೆ ಎಲ್ಲ ಕತೆಯನ್ನು ಕೆತ್ತನೆ ಮೂಲಕ ವಿವರಿಸಲಾಗಿದೆ.

ಸುರಥ ರಾಜನ ಬಳಿಕ ಚೌಟ ಮಹಾ ರಾಜನ ಕಾಲದ ಕತೆಯನ್ನು ಕೆಳಭಾಗದ ಕಲ್ಲಿನ ವೇದಿಕೆ ಭಾಗದಲ್ಲಿ ವಿವರಿಸ ಲಾಗಿದೆ. ಪುತ್ತಿಗೆ ದೇಗುಲದಲ್ಲಿ ಜಾತ್ರೆ ಬೂಳ್ಯ ಇಡುವ ಪದ್ಧತಿ, ದೇಗುಲಕ್ಕೆ ಬಂದು ಕಿವಿಯಲ್ಲಿ ಹೇಳಿ ಡಂಗುರ ಸಾರುವ ಪದ್ಧತಿ, ಜಾತ್ರೆಯ ಪದ್ಧತಿ, ಪೊಳಲಿ ಚೆಂಡಿನ ವಿಶೇಷತೆ, ಗುತ್ತಿನ ಮನೆತನ, ರಥಗಳು ಹೀಗೆ ಇದರ ಉಲ್ಲೇಖಗಳ ಸುಮಾರು 25 ಚಿತ್ರಗಳು ಕಲ್ಲಿನ ಭಾಗದಲ್ಲಿ ಮರದ ಕೆತ್ತನೆಯನ್ನು ಅಳವಡಿಸಲಾಗಿದೆ. ಕೇರಳ, ತಮಿಳುನಾಡು ಭಾಗದ ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ಕೆತ್ತನೆ ಗಳನ್ನು ಕಾಣಬಹುದಾಗಿದೆ. ಪ್ರಸ್ತುತ ಪೊಳಲಿ ಕ್ಷೇತ್ರದ ಕೆತ್ತನೆಗಳನ್ನು ಕಂಡು ಭಕ್ತರು ಆಶ್ಚರ್ಯಚಕಿತರಾಗಿದ್ದು, ಶಿಲ್ಪಿಗಳ ಕೈ ಚಳಕಕ್ಕೆ ಭೇಷ್‌ ಎನ್ನುತ್ತಿದ್ದಾರೆ.

ಬಹುವೇರ ಬಿಂಬ ಪ್ರತಿಷ್ಠೆ
ಪೊಳಲಿ ಕ್ಷೇತ್ರದ ಪ್ರಧಾನ ಗರ್ಭಗುಡಿ ಯಲ್ಲಿ ಶ್ರೀ ರಾಜರಾಜೇಶ್ವರೀ, ಭದ್ರಕಾಳಿ, ಸುಬ್ರಹ್ಮಣ್ಯ ಹಾಗೂ ಗಣಪತಿಯ ದೊಡ್ಡ ಮೂರ್ತಿಗಳಿದ್ದು, ಇತರ ಮೂರ್ತಿಗಳು ಸಹಿತ ಒಟ್ಟು 27 ಮೂರ್ತಿಗಳಿವೆ. ಒಂದೇ ಪರಿವಾರದ ದೇವರ ವಿಗ್ರಹಗಳು ಒಂದೇ ಗರ್ಭಗುಡಿಯಲ್ಲಿರುವ ಸಾನ್ನಿಧ್ಯಗಳು ಸಾಕಷ್ಟಿದ್ದು, ಭಿನ್ನ ಪರಿವಾರದ ಮೂರ್ತಿಗಳ ಗರ್ಭಗೃಹ ಪೊಳಲಿ ಕ್ಷೇತ್ರದ ವಿಶೇಷ. ತಂತ್ರಶಾಸ್ತ್ರದಲ್ಲಿ ಏಳು ಮೂಲಮಂತ್ರ ಗಳಿದ್ದು, ಆದರೆ ಅದಕ್ಕೆ ಭಿನ್ನವಾಗಿ ಕ್ಷೇತ್ರ ಕಂಡುಬರುತ್ತದೆ. ಕ್ಷೇತ್ರದಲ್ಲಿ ಮೃಣ್ಮಯ ಮೂರ್ತಿಗಳಿರುವ ಕಾರಣ ಇಲ್ಲಿನ ಪ್ರಧಾನ ಮೂರ್ತಿಗಳಿಗೆ ಅಭಿಷೇಕ, ಅರ್ಚನೆ ನಡೆಯದೆ ಕೆಳಗಡೆ ಇರುವ ಅಭಿಷೇಕ ಮೂರ್ತಿಗೆ ಅರ್ಚನೆ ನಡೆಯುವುದು ವಿಶೇಷವಾಗಿದೆ. ಬಳಿಕ ಅದನ್ನು ಪ್ರಧಾನ ಮೂರ್ತಿಗೆ ಲೀನ ಮಾಡಿ ಪ್ರಸಾದ ನೀಡಲಾಗುತ್ತದೆ. ಹೀಗಾಗಿ ಇದನ್ನು ಬಹುವೇರ ಬಿಂಬ ಪ್ರತಿಷ್ಠೆ ಎನ್ನಲಾಗುತ್ತದೆ ಎಂದು ಶಿಲ್ಪಿಗಳು ತಿಳಿಸಿದ್ದಾರೆ.

ದೀರ್ಘ‌ ಚದುರಸ ಗರ್ಭಗೃಹ
ದೇಗುಲಗಳ ನಿರ್ಮಾಣದಲ್ಲಿ ವೇಸರ, ನಾಗರ, ದ್ರಾವಿಡ ಎಂಬ ಮೂರು ಶೈಲಿಗಳಿದ್ದು, ಪೊಳಲಿ ದೇಗುಲವು ವೇಸರ ಶೈಲಿಯ ದೀರ್ಘ‌ ಚದುರಸ ಮುಖಾಯಾಮಯುಕ್ತ ಗರ್ಭಗೃಹವಾಗಿದೆ. ದೇವತ ಸಾನ್ನಿಧ್ಯದಲ್ಲಿ ಮನುಷ್ಯ ಗಾತ್ರಕ್ಕಿಂತ ದೊಡ್ಡ ವಿಗ್ರಹಗಳ ಪ್ರತಿಷ್ಠೆ ಇದ್ದರೆ, ಜತೆಗೆ ಹೆಚ್ಚಿನ ಮೂರ್ತಿಗಳು ಕಂಡುಬಂದರೆ ಈ ರೀತಿಯ ದೀರ್ಘ‌ ನಿರ್ಮಾಣ ಕಾಣಬಹುದಾಗಿದೆ.
ಗರ್ಭಗೃಹದ ನಿರ್ಮಾಣಕ್ಕೂ ಸಾಂಪ್ರದಾಯಿಕ ಶೈಲಿಯನ್ನೇ ಬಳಸಲಾಗಿದ್ದು, ಅಂದರೆ ಸುರಥ ಮಹಾರಾಜನ ಕಾಲದಲ್ಲಿ ಯಾವ ವಸ್ತುಗಳನ್ನು ಬಳಸಲಾಗಿದೆಯೋ ಅದೇ ರೀತಿ ಈಗಿನ ನಿರ್ಮಾಣವನ್ನು ಮಾಡಲಾಗಿದೆ. ಗರ್ಭಗುಡಿಗೆ ಒಂದೇ ಜಾತಿಯ ಮರವನ್ನು ಉಪಯೋಗಿಸಿರುವುದೂ ಕ್ಷೇತ್ರದ ವಿಶೇಷವಾಗಿದೆ.

 ವೈಶಿಷ್ಟ್ಯಪೂರ್ಣ ಕೆತ್ತನೆಗಳು
ವೈಶಿಷ್ಟ್ಯಪೂರ್ಣ ಕೆತ್ತನೆಗಳ ನೂತನ ಪೊಳಲಿ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಗರ್ಭಗುಡಿಯ ಹೊರಭಾಗದ ದಳಿಗಳಲ್ಲಿ ಹಾಗೂ ಕೆಳಗಿನ ಕಲ್ಲಿನ ಭಾಗದಲ್ಲಿ ಕ್ಷೇತ್ರದ ಇತಿಹಾಸ ಸಾರುವ ಕೆತ್ತನೆಯ ಚಿತ್ರಗಳನ್ನು ಬಳಸಲಾಗಿದೆ.
– ಮಹೇಶ ಮುನಿಯಂಗಳ, ವಾಸ್ತುಶಿಲ್ಪಿ

ಕಿರಣ್‌ ಸರಪಾಡಿ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here