Home ಧಾರ್ಮಿಕ ಸುದ್ದಿ ಬುಡೇರಿಯಾ ಶ್ರೀ ಶಿರಾಡಿ ದೈವದ ನರ್ತನೋತ್ಸವ

ಬುಡೇರಿಯಾ ಶ್ರೀ ಶಿರಾಡಿ ದೈವದ ನರ್ತನೋತ್ಸವ

1356
0
SHARE

ಆಲಂಕಾರು : ಇಲ್ಲಿನ ಬುಡೇರಿಯಾ ಶ್ರೀ ಶಿರಾಡಿ ದೈವಸ್ಥಾನದ ದೈವಗಳ ವಾರ್ಷಿಕ ನರ್ತನೋತ್ಸವ ಶನಿವಾರ ಹಾಗೂ ರವಿವಾರ ಪಜ್ಜಡ್ಕ ಕಲ್ಕುಡ ಕಟ್ಟೆಯ ಬಳಿ ನಡೆಯಿತು.ಡಿ. 11ರಂದು ತೋಟಂತಿಲ ಅನಂತರಾಮ್‌ ಭಟ್‌ ನೇತೃತ್ವದಲ್ಲಿ ಪಜ್ಜಡ್ಕದಲ್ಲಿ ನಾಗತಂಬಿಲ ಹಾಗೂ ರಕ್ತೇಶ್ವರಿಗೆ ತಂಬಿಲ ನಡೆದಿದ್ದು ಬಳಿಕ ಕ್ಷೇತ್ರದಲ್ಲಿ ಗೊನೆ ಮುಹೂರ್ತ ನಡೆದು ವಾರ್ಷಿಕ ನರ್ತನೋತ್ಸವಕ್ಕೆ ಚಾಲನೆ ನೀಡಲಾಗಿತ್ತು.

ಡಿ. 15ರಂದು ವೇ|ಮೂ| ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಗಣಹೋಮ, ಆಶ್ಲೇಷ ಬಲಿ, ದೈವಗಳಿಗೆ ಕಲಶಾಭಿಷೇಕ, ತಂಬಿಲ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಕೆದಿಲದಲ್ಲಿ ಅನ್ನಪ್ರಸಾದ ಭೋಜನ ನಡೆಯಿತು. ಬಳಿಕ ಸಂಜೆ ಕೆದಿಲದಲ್ಲಿ ಶ್ರೀ ಶಿರಾಡಿ ದೈವದ ಭಂಡಾರ ತೆಗೆದು ನರ್ತನೋತ್ಸವ ಸ್ಥಳದಲ್ಲಿ ಪಜ್ಜಡ್ಕ ಕಲ್ಕುಡ ಕಟ್ಟೆಯ ಬಳಿ ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ತಗೆಯಲಾಯಿತು. ರಾತ್ರಿ ಅನ್ನಪ್ರಸಾದ ಭೋಜನದ ಬಳಿಕ ರಾತ್ರಿಯಿಂದ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ ಹಾಗೂ ಚಾಮುಂಡಿ ದೈವಗಳ ನರ್ತನೋತ್ಸವ ನಡೆಯಿತು.

ಡಿ. 16ರ ಬೆಳಗ್ಗೆ ಶ್ರೀ ಶಿರಾಡಿ ದೈವದ ನರ್ತನೋತ್ಸವ, ಹರಿಕೆ ಸಂದಾಯ, ಪ್ರಾರ್ಥನೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಬಳಿಕ ಸಂಜೆ ಬಲಿಯೊಂದಿಗೆ ಗಡಿ ಜಾಗಕ್ಕೆ ಪ್ರಯಾಣ ನಡೆದು ನರ್ತನೋತ್ಸವ ಸಮಾಪ್ತಿ ಯಾಯಿತು. ಈ ಸಂಧರ್ಭ ದೈವಸ್ಥಾನದ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಬುಡೇರಿಯಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here