ಪೊಳಲಿ : ತಾಲ್ಲೂಕಿನಲ್ಲಿ ಸುಮಾರು 1,700 ವರ್ಷಗಳ ಹಿನ್ನೆಲೆ ಹೊಂದಿರುವ ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗಾಣಿಗ ಸಮಾಜದ ವತಿಯಿಂದ ಸಮರ್ಪಿಸಲಾದ ಕಂಚಿನ ದೀಪಸ್ತಂಭದಲ್ಲಿ ಬುಧವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ “ದೀಪ ಪ್ರಜ್ವಲನ’ ನೆರವೇರಿಸಲಾಯಿತು.
ಆರಂಭದಲ್ಲಿ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಆನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ಭಟ್, ಪವಿತ್ರಪಾಣಿ ಪಿ.ಮಾಧವ ಭಟ್ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಅಪಾರ ಮಂದಿ ಭಕ್ತರು ದೀಪಕ್ಕೆ ಎಣ್ಣೆ ಸಮರ್ಪಿಸಿ ದೀಪ ಪ್ರಜ್ವಲನದಲ್ಲಿ ಪಾಲ್ಗೊಂಡರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ತಾರಾನಾಥ, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ, ಸಮಿತಿ ಪ್ರಮುಖರಾದ ವಿಠಲ ಸಪಲ್ಯ ಮಳಲಿ, ಭಾಸ್ಕರ ಮಿಜಾರು, ರವಿ ಒಡಿಯೂರು, ಪದ್ಮನಾಭ ಮಳಲಿ, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎಂ. ನಾರಾಯಣ ಸಪಲ್ಯ, ಮಾಜಿ ಅಧ್ಯಕ್ಷ ಬಿ. ಯೋಗೀಶ ಸಪಲ್ಯ, ಮಾಜಿ ಉಪಾಧ್ಯಕ್ಷ ವಿಶ್ವನಾಥ ಎಸ್.ಎ. ಮತ್ತಿತರರು ಇದ್ದರು.