Home ಧಾರ್ಮಿಕ ಕಾರ್ಯಕ್ರಮ ನೀಲಾವರ: ಚಂಡಿಕಾಯಾಗ, ದೀಪ ನಮಸ್ಕಾರ

ನೀಲಾವರ: ಚಂಡಿಕಾಯಾಗ, ದೀಪ ನಮಸ್ಕಾರ

3706
0
SHARE

ಬ್ರಹ್ಮಾವರ: ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಂಭ್ರಮದಿಂದ ಜರಗಿತು. ಪ್ರತಿನಿತ್ಯ ದುರ್ಗಾ ಹೋಮ, ಭಜನೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಜಯ ದಶಮಿಯಂದು ಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ ಮತ್ತು ಸಾಮೂಹಿಕ ದೀಪ ನಮಸ್ಕಾರ ಪೂಜೆ ನಡೆಯಿತು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್‌. ರಘರಾಮ ಮಧ್ಯಸ್ಥ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ದೇವಳದ ಅರ್ಚಕರಾದ ಚಂದ್ರಶೇಖರ ಅಡಿಗ, ಕೃಷ್ಣ ಅಡಿಗ, ರಾಘವೇಂದ್ರ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧೀರ್‌ ಕುಮಾರ್‌ ಶೆಟ್ಟಿ, ರಮೇಶ್‌ ಪೂಜಾರಿ, ಹೇಮಾ ವಿ. ಬಾಸ್ರಿ, ಸದಾಶಿವ ದೇವಾಡಿಗ, ಮಲ್ಲಿಕಾ ಎಸ್‌. ಶೆಟ್ಟಿ, ರಮೇಶ್‌ ನಾಯ್ಕ, ಸುರೇಂದ್ರ ಸುವರ್ಣ, ಅರ್ಚಕ ವೃಂದ, ಸಿಬಂದಿ, ಉಪಾದಿವಂತರು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.

ಅನ್ನಪ್ರಸಾದ ನವರಾತ್ರಿ ಪ್ರಾರಂಭದ ದಿನ ಉದ್ಘಾಟನೆಗೊಂಡ ವಿಶಾಲವಾದ ಸುಸಜ್ಜಿತ ಮನಸ್ವಿನೀ ಅನ್ನಛತ್ರದಲ್ಲಿ ನವರಾತ್ರಿ ಪರ್ಯಂತ ಪ್ರತಿನಿತ್ಯ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here