Home ಧಾರ್ಮಿಕ ಸುದ್ದಿ ಬಾರಕೂರು ಗಣೇಶೋತ್ಸವಕ್ಕೆ ಹಿರಿತನದ ಗೌರವ: 52ನೇ ವರ್ಷದ ಸಂಭ್ರಮ

ಬಾರಕೂರು ಗಣೇಶೋತ್ಸವಕ್ಕೆ ಹಿರಿತನದ ಗೌರವ: 52ನೇ ವರ್ಷದ ಸಂಭ್ರಮ

1765
0
SHARE
ಈ ಬಾರಿ ಪೂಜೆಗೊಳ್ಳುವ ಗಣೇಶನ ವಿಗ್ರಹ.

ಬ್ರಹ್ಮಾವರ: ಬಾರಕೂರು ಗಣೇಶೋತ್ಸವಕ್ಕೆ ಹಿರಿತನದಲ್ಲಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ. 1968ರಲ್ಲಿ ಪ್ರಾರಂಭಗೊಂಡ ಗಣೇಶೋತ್ಸವಕ್ಕೆ ಇದೀಗ 52ರ ಸಂಭ್ರಮ.

ಗಣೇಶ್‌ ಬೀಡಿ ವರ್ಕ್ಸ್ನ ಸಂಸ್ಥಾಪಕರಾದ ದಿ| ಗೋವಿಂದ ರಾವ್‌ ಅವರ ಸಹಕಾರದಿಂದ ಬಾರಕೂರು ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಗಣಪತಿಯ ವಿಗ್ರಹವಿಟ್ಟು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಪ್ರಾರಂಭಗೊಂಡಿತು.

ಆ ಸಮಯದಲ್ಲಿ ಮುಂದಾಳತ್ವವನ್ನು ನಂಚಾರು ಶ್ರೀನಿವಾಸ ನಾಯಕ್‌, ನಾಗೇಶ್‌ ಕಾಮತ್‌ ನಾಗರಮಠ, ಎಂ. ನಾರಾಯಣ ಭಂಡಾರ್‌ಕಾರ್‌, ವೈಕುಂಠ ಕಾಮತ್‌, ಬಿ. ಮಂಜುನಾಥ ಪೈ, ಬಿ. ಅನಂತ ನಾಯಕ್‌, ಬಿ. ಸಾಂತಪ್ಪ ಪೈ, ಲಕ್ಷ್ಮೀನಾರಾಯಣ ಪೈ, ಕಲ್ಚಪ್ರ ಗೋಪಾಲಕೃಷ್ಣ ಕಾಮತ್‌, ಬುಡನ್‌ ಬಾಷಾ ಸಾಹೇಬ್‌, ಬಿ. ನಾಗೇಶ್‌ ರಾವ್‌ ಮೊದಲಾದವರು ವಹಿಸಿದ್ದರು. ಆಗ ಮೂರ್ತಿಯನ್ನು ದೇವಸ್ಥಾನದ ವಠಾರದಲ್ಲಿಯೇ ಸಾಲಿಗ್ರಾಮದ ಪೈಂಟರ್‌ ರಾಮದಾಸ್‌ ರಚಿಸುತ್ತಿದ್ದರು.

ರಜತ ಸಂಭ್ರಮ
25ನೇ ವರ್ಷವನ್ನು ಸಂಭ್ರಮದಿಂದ ನಡೆಸ ಲಾಯಿತು. ಆ ಸಮಯದಲ್ಲಿ ವಿಗ್ರಹ ರಚನೆಯನ್ನು ಉಡುಪಿಯ ಕೃಷ್ಣರಾಜ್‌, ವಿಶ್ವನಾಥ್‌ ಮಾಡುತ್ತಿದ್ದರು. ಹಿರಿಯರಾದ ವೈ. ಗಣಪತಿ ಕಾಮತ್‌, ವೆಂಕಟರಮಣ ಭಂಡಾರ್‌ಕಾರ್‌, ವೈ. ಮೋಹನದಾಸ್‌ ಕಾಮತ್‌, ಬಿ. ಶಾಂತಾರಾಮ ಶೆಟ್ಟಿ, ಬಿ. ಶ್ರೀನಿವಾಸ ಶೆಟ್ಟಿಗಾರ್‌, ಸ್ಟ್ಯಾನಿಪಾಯಸ್‌, ಕೆ. ಗೋಕುಲ್ದಾಸ್‌ ಕಾಮತ್‌, ಬಿ. ಸುರೇಶ್‌ ಪೈ, ನಾಗೇಂದ್ರ ಮಲ್ಯ, ಶೌಕತ್‌ ಅಲಿ, ಬಿ. ಪಾಂಡುರಂಗ ಪೈ, ಬಿ. ರಾಮಚಂದ್ರ ಕಾಮತ್‌ ಮತ್ತಿತರರು ನೇತೃತ್ವ ವಹಿಸಿದ್ದರು.

ಸುವರ್ಣ ಮಹೋತ್ಸವ
2017ರಲ್ಲಿ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಹಸ್ರ ಮೋದಕ ಹವನ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಆಗಮಿಸಿ ಶುಭಹಾರೈಸಿದ್ದರು. 50ರ ಸವಿನೆನಪಿಗಾಗಿ ದಿ| ಬಿ. ಗೋವಿಂದ ರಾವ್‌ ಅವರ ಸ್ಮರಣಾರ್ಥ ಪುತ್ರ ಜಗನ್ನಾಥ ಶೆಣೈ ಅವರ ದೇಣಿಗೆಯೊಂದಿಗೆ ಊಟದ ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. 50ನೇ ವರ್ಷದ ಅಧ್ಯಕ್ಷರಾಗಿ ಎಂ. ವೆಂಕಟರಮಣ ಭಂಡಾರ್‌ಕರ್‌, ಉಪಾಧ್ಯಕ್ಷ ಬಿ. ಸುರೇಶ್‌ ಪೈ, ಕಾರ್ಯದರ್ಶಿ ವೈ. ಮೋಹನದಾಸ್‌ ಕಾಮತ್‌, ಖಜಾಂಚಿ ಬಿ. ಗೋಕುಲ್ದಾಸ್‌ ಕಾಮತ್‌, ಪದಾಧಿಕಾರಿ, ಸದಸ್ಯರು ಸೇವೆ ಸಲ್ಲಿಸಿದ್ದರು. ಇದೀಗ ಊರವರ ಸಹಕಾರದೊಂದಿಗೆ 52ನೇ ವರ್ಷದ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಆರಾಧನೆ ಬಳಿಕ ಬಾರಕೂರು ಬಟ್ಟೆವಿನಾಯಕ ದೇವಸ್ಥಾನ ಸಮೀಪದ ಕೋಟೆಕೆರೆಯಲ್ಲಿ ವಿಗ್ರಹ ವಿಸರ್ಜಿಸಲಾಗುತ್ತದೆ.

ಮೆಲುಕು
ಪ್ರಾರಂಭದ ವರ್ಷಗಳಲ್ಲಿ ದೋಣಿ ಸ್ಪರ್ಧೆ, ಈಜು, ರಂಗೋಲಿ, ಸಂಗೀತ, ಹೂವು ಕಟ್ಟುವ ಸ್ಪರ್ಧೆಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ನಡೆಯುತ್ತಿತ್ತು.

ಕರ್ಕಿಯ ಗಣಪ
50ನೇ ವರ್ಷದಿಂದ ಹೊನ್ನಾವರದ ಕರ್ಕಿಯ ಸುರೇಶ್‌ ಭಂಡಾರಿ ಅವರು ವಿಗ್ರಹ ರಚನೆ ಮಾಡಿ ಕೊಡುತ್ತಿದ್ದಾರೆ. ಸುಮಾರು 40 ವರ್ಷಗಳಿಂದಲೂ ಗಣೇಶನ ವಿಗ್ರಹ ತರುವಲ್ಲಿ ಸಾಲಿಗ್ರಾಮದ ರಾಮಚಂದ್ರ ಕಾಮತ್‌ ಅವರ ವೀರ ಮಾರುತಿ ಟ್ರಾನ್ಸ್‌ಪೋರ್ಟ್‌ ಸಹಕರಿಸುತ್ತಿದೆ.

ಸರ್ವ ಧರ್ಮ ಸಹಿಷ್ಣುತೆ
ಗಣೇಶೋತ್ಸವದ ಮೂಲ ಉದ್ದೇಶವೇ ಏಕತೆ, ಪರಸ್ಪರ ಒಗ್ಗಟ್ಟು. ಈ ನಿಟ್ಟಿನಲ್ಲಿ ಬಾರಕೂರು ಗಣೇಶೋತ್ಸವದಲ್ಲಿ ಸರ್ವ ಧರ್ಮದವರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಸಂಪ್ರದಾಯಕ್ಕೆ ಭಂಗ ಸಲ್ಲದು
ಗಣೇಶೋತ್ಸವ ಆಚರಣೆಯಲ್ಲಿ ಸಂಪ್ರದಾಯಕ್ಕೆ ಎಂದಿಗೂ ಭಂಗ ಬರಬಾರದು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಲ್ಲಿ ಆಕರ್ಷಣೆಗಾಗಿ ಪರಿಮಿತಿ ದಾಟ ಬಾರದು. ಇದುವೇ ಸ್ಥಾಪಕರಾದ ಬಾಲಗಂಗಾಧರ ತಿಲಕರಿಗೆ ನೀಡುವ ಗೌರವ.
-ಎಂ.ವೆಂಕಟರಮಣ ಭಂಡಾರ್‌ಕಾರ್‌,
ಅಧ್ಯಕ್ಷರು, ಬಾರಕೂರು ಗಣೇಶೋತ್ಸವ

LEAVE A REPLY

Please enter your comment!
Please enter your name here