ನಗರ : ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಮತ್ತು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಮಾ. 26ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾ ಯಣಗುರು ಮಂದಿರದಲ್ಲಿ ನಡೆಯಿತು.
ನಾರಾಯಣ ಶಾಂತಿ ಪಟ್ಲಕೆರೆ ಮತ್ತು ಶಿಷ್ಯವೃಂದದ ನೇತೃತ್ವದಲ್ಲಿ ವೈದಿಕ ಕಾರ್ಯ ಕ್ರಮ ನಡೆದಿದ್ದು, ಪ್ರಾತಃಕಾಲ ಸ್ವಸ್ತಿ ಪುಣ್ಯಾಹ, ಗಣಹೋಮ, ಬಳಿಕ ನವಕ ಕಲಶಾಭಿಷೇಕ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಹಸ್ರನಾಮಾವಳಿ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.
ಸಾವಿರಾರು ಭಕ್ತರು ಶ್ರೀ ಸತ್ಯನಾರಾಯಣ ದೇವರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪೆಗೆ ಪಾತ್ರರಾದರು. ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷರಾದ ಪ್ರವೀಣ ಕುಮಾರ್ ಕೆಡೆಂಜಿಗುತ್ತು, ಪೂಜಾ ವಸಂತ್, ಕಾರ್ಯದರ್ಶಿ ಕೇಶವ ಬೆದ್ರಾಳ, ಜತೆ ಕಾರ್ಯದರ್ಶಿ ಸದಾನಂದ ಕುಮಾರ್ ಅಲಂಕಾರು, ಕೋಶಾಧಿ ಕಾರಿ ನಾಗೇಶ್ ಬಲಾ°ಡು, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾರ್ಯನಿರ್ವಹಣಾಧಿ ಕಾರಿ ಆರ್.ಸಿ. ನಾರಾಯಣ ರೆಂಜ, ಗುರು ಮಂದಿರದ ಸದಸ್ಯರಾದ ಚಂದ್ರಕಾಂತ ಶಾಂತಿವನ, ಜಯಂತ್ ಕೆಂಗುಡೇಲು, ಅರ್ಚಕರಾದ ಜಗದೀಶ ಶಾಂತಿ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ವಿಜಯ ಕುಮಾರ್ ಸೊರಕೆ, ಶೇಷಪ್ಪ ಬಂಗೇರ, ಕೆ.ಪಿ. ದಿವಾಕರ್, ಮದನ ಪೂಜಾರಿ ಕುದ್ಮಾರು, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರು, ಸಂಚಾಲಕರು, ಯುವವಾಹಿನಿ ಅಧ್ಯಕ್ಷರು, ಪದಾಧಿ ಕಾರಿಗಳು, ಮಹಿಳಾ ವೇದಿಕೆಯ ಪದಾಧಿ ಕಾರಿಗಳು ಉಪಸ್ಥಿತರಿದ್ದರು.