ಪುಂಜಾಲಕಟ್ಟೆ: ಶ್ರೀಕ್ಷೇತ್ರ ಕಕ್ಯಬೀಡಿಗೆ ಇದೇ ವರ್ಷದ ಕೊನೆಯ ಭಾಗದಲ್ಲಿ ಹೊಸ ಬ್ರಹ್ಮರಥ ನಿರ್ಮಾಣವಾಗಿ ಸೇವೆಗೆ ಸಿದ್ಧವಾಗಲಿದೆ ಎಂದು ಶ್ರೀಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು. ದಾಮೋದರ ನಾಯಕ್ ಹೇಳಿದರು. ಬಂಟ್ವಾಳ ತಾ| ಉಳಿ ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರಗಿದ ನೂತನ ಬ್ರಹ್ಮರಥದ ನಿರ್ಮಾಣ ಕುರಿತು ಜೀರ್ಣೋದ್ಧಾರ ಸಮಿತಿ, ಗೌರವ ಸದಸ್ಯರ, ಭಕ್ತರ ವಿಶೇಷ ಸಭೆಯಲ್ಲಿ ಅವರು ಮಾತನಾಡಿ, ದೇವಸ್ಥಾನದಲ್ಲಿ ವಾರ್ಷಿಕ ಚೌತಿ ಹಬ್ಬ, ನಾಲೇರು ಮುಂಡೇವು ಮತ್ತು ನವರಾತ್ರಿ ಹಬ್ಬ ಆಚರಿಸಲಾಗುವುದು ಎಂದರು.
ಜೀರ್ಣೋದ್ಧಾರ ಸಮಿತಿ ಸ್ಥಾಪಕ ಅಧ್ಯಕ್ಷ ಕೆ. ಜಾರಪ್ಪ ಶೆಟ್ಟಿ ಮಾತನಾಡಿ, 40 ಲಕ್ಷ ರೂ. ವೆಚ್ಚದಲ್ಲಿ ಮೂಡಬಿದಿರೆಯ ಅಶ್ವತ್ಥಪುರದಲ್ಲಿ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದ್ದು, ಈಗಾ ಗಲೇ ಶೇ. 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು. ಈ ಸಂದರ್ಭ ಕೇರ್ಯ ಸಂಜೀವ ಪೂಜಾರಿ 1.15 ಲಕ್ಷ ರೂ., ಕಂರ್ಬಡ್ಕ ಚಂದ್ರಶೇಖರ 1 ಲಕ್ಷ ರೂ., ಕೊರಗಪ್ಪ ಯಾನೆ ಚಂದ್ರ ಪೂಜಾರಿ 45 ಸಾವಿರ ರೂ., ಕೆ. ಸೀತಾರಾಮ ಶೆಟ್ಟಿ 15 ಸಾವಿರ ರೂ., ಬಲ್ಲೋಡಿಗುತ್ತು ಪದ್ಮಶೇಖರ ಜೈನ್ 15 ಸಾವಿರ ರೂ., ಮಹಮ್ಮಾಯಿ ನಾರಾಯಣ ಗೌಡ, ತೀರ್ಥೇಶ್ ಅವರಿಂದ ತಲಾ 5 ಸಾವಿರ ರೂ.ಗಳ ದೇಣಿಗೆ ಸ್ವೀಕರಿಸಲಾಯಿತು. ಆಸಕ್ತ ಭಕ್ತರಿಂದ ತಲಾ 10 ಸಾವಿರ ರೂ.ಗಳ ಮರು ಪಾವತಿ ಆಧಾರದಲ್ಲಿ ಸಂಗ್ರಹ, ತಲಾ 5,000 ರೂ. ವಂತಿಗೆ ರೂಪದಲ್ಲಿ ಸಂಗ್ರಹ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಕ್ಷೇತ್ರ ಮೊಕ್ತೇಸರ ರಾಜವೀರ ಮೂಡಬಿದಿರೆ, ಅರ್ಚಕ ಶ್ರೀನಿವಾಸ ಅರ್ಮುಡ್ತಾಯ, ರಾಜೇಂದ್ರ ಕೆ., ಉಳಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್, ಕಕ್ಯಪದವು ಗರೋಡಿ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಗ್ರಾ.ಪಂ. ಸದಸ್ಯರಾದ ಕೆ. ಚಿದಾನಂದ ರೈ, ಚೇತನ್ ಊರ್ದೊಟ್ಟು, ಸಂಜೀವ ಗೌಡ ಅಗ್ಪಲ, ಜೀರ್ಣೋದ್ಧಾರ ಸಮಿತಿಯ ಪಿ. ವಾಸುದೇವ ಮಯ್ಯ, ವಿಶ್ವನಾಥ ಸಾಲ್ಯಾನ್, ರಾಮಯ್ಯ ಭಂಡಾರಿ, ಸ್ಥಳೀಯರಾದ ಕೇರ್ಯ ಸಂಜೀವ ಪೂಜಾರಿ, ಕಿಂಜಾಲು ಜಯ ಶೆಟ್ಟಿ, ಕಕ್ಯ ಸೀತಾರಾಮ ಶೆಟ್ಟಿ, ಮಜಲು ವಾಸು ಪೂಜಾರಿ ಮತ್ತು ನಿವೃತ್ತ ಶಿಕ್ಷಕ ಮುತ್ತಪ್ಪ ಗೌಡ ಹಾಗೂ ಶ್ರೀ ಕ್ಷೇತ್ರ ಕಕ್ಯಬೀಡಿನ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಯು. ದಾಮೋದರ ನಾಯಕ್ ಸ್ವಾಗತಿಸಿ, ಸಮಿತಿ ಕಾರ್ಯದರ್ಶಿ ಬಿ. ನಾರಾಯಣ ರೈ ವಂದಿಸಿದರು. ಕ್ಷೇತ್ರದ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್ ನಿರೂಪಿಸಿದರು.