ಬೆಳ್ತಂಗಡಿ : ಬಡಕೋಡಿ- ಕಾಶಿಪಟ್ಣ ಶ್ರೀ ಆದಿಶಕ್ತಿ ಮಹಾಮ್ಮಾಯಿ ಅಮ್ಮನವರ ದೇವಸ್ಥಾನದ ನೂತನ ಶಿಲಾಮಯ ದೇವಳದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಎ. 28 ರಿಂದ 30ರ ವರೆಗೆ ಜರಗಲಿದ್ದು, ಇದರ ಪ್ರಯುಕ್ತ ಕಲಶ ಕೂಪನ್ಗಳನ್ನು ದೇವಳದ ಆವರಣದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧರಣೇಂದ್ರ ಕುಮಾರ್ ಹೊಸಂಗಡಿ ಬಿಡುಗಡೆಗೊಳಿಸಿದರು.
ತಂತ್ರಿ ಮಾರೂರು ವೆಂಕಟರಾಜ ಆಸ್ರಣ್ಣ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಸಂತೋಷ್ ಕುಮಾರ್ ಲಾೖಲ, ಕಾರ್ಯ ದರ್ಶಿ ರವಿ ನಾಯ್ಕ ಬಡಕೋಡಿ, ಪ್ರಧಾನ ಸಂಚಾಲಕ ಶ್ರೀಪತಿ ಉಪಾಧ್ಯಾಯ ಸಂಪಿಗೆದಡಿ, ಕೋಶಾಧಿಕಾರಿ ವಿಜಯ ನಾಯ್ಕ, ಆಡಳಿತ ಸಮಿತಿ ಗೌರವಾಧ್ಯಕ್ಷ ಕುಪ್ಪಣ್ಣ ನಾಯ್ಕ, ಅಧ್ಯಕ್ಷ ಲಿಂಗಪ್ಪ ನಾಯ್ಕ, ಕಾರ್ಯದರ್ಶಿ ವಾಸುದೇವ ನಾಯ್ಕ, ಅರ್ಚಕ ದಾಸು ನಾಯ್ಕ, ಕಲಶ ಸಮಿತಿ ಸಂಚಾಲಕ ಶೇಷಪ್ಪ ನಾಯ್ಕ ಕಾಜೊಟ್ಟು, ಸಹಸಂಚಾಲಕ ಕೊರಗಪ್ಪ ನಾಯ್ಕ ಗಿಳಿಕಾಪು ಉಪಸ್ಥಿತರಿದ್ದರು.