ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ರವಿವಾರ ಪೂಜಾ ವಿಧಿವಿಧಾನಗಳು ನೆರವೇರಿದವು. ರವಿ ವಾರ ಬೆಳಗ್ಗೆ 7.23ರಿಂದ 8.23ರ ವರೆಗಿನ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀದುರ್ಗಾಪರಮೇಶ್ವರೀ, ಶ್ರೀ ರಾಜರಾಜೇ ಶ್ವ ರೀ, ಶ್ರೀ ಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ ದೇವರ ಪ್ರತಿಷ್ಠೆ- ಜೀವಕಲಶಾಭಿಷೇಕವನ್ನು ವಿ ಧಿವತ್ತಾಗಿ ನಡೆಸಲಾಯಿತು. ದೇವಸ್ಥಾನ ನವೀಕರಣಗೊಳ್ಳುವ ಮುನ್ನ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರನ್ನು ಈಗ ಮೂಲ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮುನ್ನ ಪ್ರಾತಃಕಾಲ 4ರಿಂದ ಪುಣ್ಯಾಹ, ಗಣಹೋಮ, ಪ್ರಾಸಾದ ಪ್ರತಿಷ್ಠೆ ನಡೆಸಲಾಯಿತು.
ಬೆಳಗ್ಗೆ 10.40ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಕಲಶಾಭಿಷೇಕ, ಕ್ಷೇತ್ರಪಾಲ ಸಹಿತ ದೈವಗಳ ಪ್ರತಿಷ್ಠೆ, ಅಂಕುರಪೂಜೆ, ಮಹಾಪೂಜೆ ನಡೆಸಲಾಯಿತು. ದೇವರ ಗರ್ಭಗುಡಿಯ ಮುಗುಳಿ ಏರಿಸುವ ಕ್ರಮವನ್ನು ವಿಧಿದಿವತ್ತಾಗಿ ನಡೆಸಲಾಯಿತು.
ಧ್ವಜಸ್ತಂಭ ಪ್ರತಿಷ್ಠೆ
ನವೀಕೃತ ದೇವಸ್ಥಾನದ ಬಿಲ್ಲವ ಸಮಾಜದವರು ಸಮರ್ಪಿಸಿದ ನೂತನ ಧ್ವಜಸ್ಥಂಭದ ಪ್ರತಿಷ್ಠಾಪನೆ ಈ ವೇಳೆ ನಡೆಸಲಾಯಿತು. ಚಿನ್ನದ ಲೇಪಿತ ನವಿಲಿನ ಮೂರ್ತಿಯನ್ನು ಕೊಡಿಮರದ ತುದಿಯಲ್ಲಿ ಪ್ರತಿಷ್ಠಾಪಿಸಿ ನವಿಲು ಧ್ವಜ ಏರಿಸಲಾಯಿತು. ಮಧ್ಯಾಹ್ನ ಪಾಕಶಾಲೆಯಲ್ಲಿ ಪಲ್ಲಪೂಜೆ ನೆರವೇರಿಸಲಾಯಿತು. ಸಾಯಂಕಾಲ 5ರಿಂದ ದುರ್ಗಾಪೂಜೆ, ಇಂದ್ರಾದಿ ದಿಕಾ³ಲ ಪ್ರತಿಷ್ಠೆ, ಮಾತೃಕಾಪೀಠ ಹಾಗೂ ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರಪೂಜೆ, ಮಹಾಬಲಿಪೀಠಾಧಿವಾಸ, ಕ್ಷೇತ್ರಪಾಲಾದಿ ದೈವಗಳಿಗೆ ಕಲಶಾವಾಸ ಅವಾಸ ಹೋಮ, ಮಹಾಪೂಜೆ ನಡೆಸಲಾಯಿತು.
ಕೊಡಿಮರದ ಸುತ್ತ ಹಾರಾಡಿದ ಮೂರು ಗಿಡುಗಗಳು
ಪೊಳಲಿಯಲ್ಲಿ ನೂತನ ಧ್ವಜಸ್ತಂಭಕ್ಕೆ ಚಿನ್ನದ ನವಿಲಿನ ಮೂರ್ತಿ ಯನ್ನು ಪ್ರತಿಷ್ಠಾಪಿಸುವ ವೇಳೆ ಮೂರು ಗಿಡುಗಗಳು ಧ್ವಜಸ್ತಂಭದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವುದಾಗಿ ಭಕ್ತರು ಹೇಳಿಕೊಂಡಿದ್ದು, ಅಚ್ಚರಿ ವ್ಯಕ್ತವಾಗಿದೆ.
ಭಕ್ತಸಾಗರ
ಶ್ರೀ ರಾಜರಾಜೇಶ್ವರೀ ಪ್ರತಿಷ್ಠಾ ಅಷ್ಠಬಂಧ ನೂತನ ಧ್ವಜಪ್ರತಿಷ್ಠಾ ದಿನವಾದ ರವಿ ವಾ ರ ಸಾವಿರಾರು ಮಂದಿ ಭಕ್ತರು ಆಗಮಿಸಿ ಶ್ರೀ ದೇವಿಯ ಮೃಣ್ಮಯ ಮೂರ್ತಿಯ ದರ್ಶನ ಪಡೆದರು. ಕಡು ಕೆಂಪು ಬಣ್ಣದಿಂದ ಶೋಭಿಸುತ್ತಿದ್ದ ಮಾತೆ ಕೇಸರಿ ಬಣ್ಣದಿಂದ ಶೋಭಿಸುತ್ತಿದ್ದರು. ಅಚ್ಚುಕಟ್ಟಾದ ವ್ಯವಸ್ಥೆ ರುಚಿಕಟ್ಟಾದ ಉಪಾಹಾರ, ಅನ್ನಪೂರ್ಣೆಯ ಪ್ರಸಾದವನ್ನು ಲಕ್ಷಾಂತರ ಮಂದಿ ಪ್ರಸಾದ ರೂಪವಾಗಿ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಕರ್ಣಾಟಕ ಸಂಗೀತ, ಪ್ರಶಂಸ ಕಾಪು ತಂಡ ಬಲೆತೆಲಿಪಾಲೆ, ಅನಘಾ ಪ್ರಸಾದ್ ಅವರಿಂದ ಹರಿಕಥೆ, ಅಭಿಜ್ಞಾ ಭಟ್ ಅವರಿಂದ ಭರತನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಸಾಗರ ಕಣ್ತುಂಬಿಕೊಂಡರು.
ಇಂದಿನ ಕಾರ್ಯಕ್ರಮಗಳು
ಬೆಳಗ್ಗೆ 5ಗಂಟೆಗೆ ಪುಣ್ಯಾಹ, ಗಣಹೋಮ, ರುದ್ರಯಾಗ, ಶಾಂತಿಪ್ರಾಯಶ್ಚಿತ ಹೋಮಗಳು, ಪ್ರೋಕ್ತ ಹೋಮಗಳು, ಮಹಾಬಲಿಪೀಠ ಪ್ರತಿಷ್ಠೆ, ಹೋಮ ಕಲಶಾಭಿಷೇಕಗಳು,ದೈವಗಳಿಗೆ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ, ಸಂಜೆ 5ರಿಂದ ಶ್ರೀ ಚಕ್ರ ಪೂಜೆ, ಕ್ಷೇತ್ರಪಾಲ ಪ್ರತಿಷ್ಠೆ, ಮಂಟಪ ಸಂಸ್ಕಾರ, ಮಂಡಲ ರಚನೆ, ಅಂಕುರ ಪೂಜೆ, ಮಹಾಪೂಜೆ ಜರ ಗ ಲಿದ್ದು, ಸಂಜೆ 6 ಗಂಟೆಗೆ ನಡೆ ಯುವ ಧಾರ್ಮಿಕ ಸಭೆ ಯಲ್ಲಿ ಮಂಗಳೂರು ರಾಮಕೃಷ್ಣಾಶ್ರಮದ ಶ್ರೀ ಜಿತಕಾಮಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀ ರ್ವ ಚನ ನೀಡ ಲಿ ದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರ ಗ ಲಿ ವೆ.