Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವದ ಉಪ ಸಮಿತಿ ರಚನ ಸಭೆ

ಬ್ರಹ್ಮಕಲಶೋತ್ಸವದ ಉಪ ಸಮಿತಿ ರಚನ ಸಭೆ

1496
0
SHARE

ಸವಣೂರು : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 2ರಂದು ಆರಂಭವಾಗಲಿದೆ. ಈ ಬಗ್ಗೆ ದೇವಾಲಯದ ವಠಾರದಲ್ಲಿ ಬ್ರಹ್ಮಕಲಶೋತ್ಸವದ ಉಪ ಸಮಿತಿಗಳ ರಚನ ಸಭೆ ಹಾಗೂ ಭಕ್ತರ ಸಭೆ ಶುಕ್ರವಾರ ಜರಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ದೇಗುಲದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಅವರು ಮಾತನಾಡಿ, ದೇವಾಲಯದ ಬ್ರಹ್ಮಕಲಶೋತ್ಸವ ಊರಿನ ಹಬ್ಬವಾಗಬೇಕು. ಎಲ್ಲರೂ ಒಗ್ಗೂಡಿ ಕೆಲಸ ನಿರ್ವಹಿಸಬೇಕು.

ಇಂದು ರಚನೆಯಾದ ಉಪ ಸಮಿತಿಗಳ ಸದಸ್ಯರುಗಳು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಎಂದರು. ಬ್ರಹ್ಮಕಲಶೋತ್ಸವ ಸಂದರ್ಭ ಎರಡು ಧಾರ್ಮಿಕ ಸಭೆಗಳನ್ನು ಆಯೋಜಿಸಲಾಗುವುದು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಆಶಯ ಇದೆ ಎಂದು ಹೇಳಿದರು.

ದೇವಾಲಯದ ಪ್ರಧಾನ ಆರ್ಚಕ ಗೋಪಾಲಕೃಷ್ಣ ಬಡಿಕಿಲ್ಲಾಯ ಅವರು ಮಾತನಾಡಿ, ಸವಣೂರು ಶ್ರೀ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಭಕ್ತರು ಸಹಕರಿಸುವಂತೆ ಕೋರಿದರು.

ಸವಣೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ನಾಗರಾಜ್‌ ನಿಡ್ವಣ್ಣಾಯ ಕುಮಾರಮಂಗಲ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್‌ ಕುಮಾರ್‌ ಬಂಬಿಲಗುತ್ತು, ಉಪಾಧ್ಯಕ್ಷ ಸವಣೂರು ಎನ್‌. ಸುಂದರ ರೈ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್‌ ರೈ ನೋಲ್ಮೆ, ವಿಜಯ ಕುಮಾರ್‌ ಬಂಬಿಲಗುತ್ತು, ಮಹಿಳ್‌ ನಾಥ್‌ ಶೆಟ್ಟಿ ಅರಿಯಡ್ಕ, ಮೋಹನ್‌ ದಾಸ್‌ ಶೆಟ್ಟಿ ನೂಜಿಬೈಲು, ಗಣೇಶ್‌ ಶೆಟ್ಟಿ ಕುಂಜಾಡಿ, ಸವಣೂರು ಬೊಳ್ಳಿಬೋಲ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್‌ ಚಂದ್ರ ರೈ ಮುಗೇರುಗುತ್ತು. ಸುಧೀರ್‌ ಕುಮಾರ್‌ ರೈ ಕುಂಜಾಡಿ, ವಿಠಲ ರೈ ನೆಕ್ಕರೆ, ಗಂಗಾಧರ್‌ ಸುಣ್ಣಾಜೆ, ಶಿವರಾಮ ಗೌಡ ಮೆದು, ರಾಘವ ಗೌಡ ಸವಣೂರು, ದಯಾನಂದ ಮಾಲೆತ್ತಾರು, ಗಿರಿಶಂಕರ್‌ ಸುಲಾಯ, ಮಹೇಶ್‌ ಕೆ. ಸವಣೂರು, ರಾಮಕೃಷ್ಣ ಪ್ರಭು, ಸವಣೂರು ಗ್ರಾ.ಪಂ. ಸದಸ್ಯೆ ಗಾಯತ್ರಿ ಬರೆಮೇಲು, ಶಿಕ್ಷಕ ತಾರಾನಾಥ ಸವಣೂರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಸವಣೂರುಗುತ್ತು ವೆಂಕಪ್ಪ ಶೆಟ್ಟಿ ಸ್ವಾಗತಿಸಿ, ಬೆಳಿಯಪ್ಪ ಗೌಡ ಚೌಕಿಮಠ ವಂದಿಸಿದರು. ಕುಂಜಾಡಿ ಪ್ರಪುಲ್ಲಚಂದ್ರ ರೈ ಅವರು
ವಿವಿಧ ಉಪ ಸಮಿತಿಗಳ ಆಯ್ಕೆಯನ್ನು ಘೋಷಿಸಿದರು. ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಉಮಾಪ್ರಸಾದ್‌ ರೈ ನಡುಬೈಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here