ಸವಣೂರು : ಪರಣೆ ಸಮೀಪ ಇರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 2ರಿಂದ 7ರ ತನಕ ನಡೆಯಲಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಕಚೇರಿ ರವಿವಾರ ದೇವಸ್ಥಾನದ ವಠಾರದಲ್ಲಿ ಉದ್ಘಾಟನೆಗೊಂಡಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಕಚೇರಿ ಯನ್ನು ಉದ್ಘಾಟಿಸಿದರು. ಪ್ರಶಾಂತ ವಾದ ಪರಿಸರದಲ್ಲಿ ಭವ್ಯವಾಗಿ ನಿರ್ಮಾಣ ವಾಗಿರುವ ದೇಗುಲದ ಬ್ರಹ್ಮಕಲಶೋತ್ಸವ ಅದ್ದೂರಿಯಿಂದ ನಡೆದು, ಊರಿಗೆ ನೆಮ್ಮದಿ, ಶಾಂತಿ ಲಭಿಸಲಿ. ಎಲ್ಲ ಆಸ್ತಿಕ ಬಾಂಧವರ ಶ್ರಮದ ಫಲವಾಗಿ ದೇವಸ್ಥಾನ ಸುಂದರವಾಗಿ ನವೀಕರಣಗೊಂಡಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳೂ ವ್ಯವಸ್ಥಿತವಾಗಿ ನಡೆಯಲಿ ಎಂದು ಆಶಿಸಿದರು.
ದೇವಾಲಯದ ಅರ್ಚಕ ನಾರಾಯಣ ಬಡೆಕಿಲ್ಲಾಯ ಅವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹೋಮ ನಡೆಯಿತು. ದೇವಾಲ ಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ರೈ ನೋಲ್ಮೆ, ಕೋಶಾಧಿಕಾರಿಗಳಾದ ಬೆಳಿಯಪ್ಪ ಗೌಡ ಚೌಕಿಮಠ, ರಾಘುವ ಗೌಡ ಸವಣೂರು, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಸವಣೂರು ಗ್ರಾ.ಪಂ. ಸದಸ್ಯ ಸತೀಶ್ ಬಲ್ಯಾಯ ಕನ್ನಡಕುಮೇರು, ರಾಮ ಚಂದ್ರ ಗೌಡ ಕಟ್ಟಕೋಡಿ, ಜಯರಾಮ ರೈ ಕನ್ನಡಕುಮೇರು, ಶಿವರಾಮ ಗೌಡ ಮೆದು, ಕುಲಪ್ರಕಾಶ್ ಮೆದು ಉಪಸ್ಥಿತರಿದ್ದರು.