Home ಧಾರ್ಮಿಕ ಸುದ್ದಿ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ

1450
0
SHARE

ಪೊಳಲಿ: ಇಲ್ಲಿನ ಶ್ರೀರಾಜ ರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರು ವಾರದಂದು ವೈದಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯ ಕ್ರಮಗಳು ಜರಗಿದವು. ದೇಗುಲದಲ್ಲಿ ಬೆಳಗ್ಗೆ 6ರಿಂದ ದೇವರಿಗೆ ಪುಣ್ಯಾಹ ನಡೆದು ಗಣಪತಿ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಚೋರಶಾಂತಿ, ಸ್ವಶಾಂತಿ, ಅದ್ಭುತ ಶಾಂತಿ ತತ್ವಕಲಶಪೂಜೆ, ತತ್ವ ಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ ನಡೆದವು. ಸಂಜೆ ದುರ್ಗಾಪೂಜೆ, ಸಪರಿವಾರ ಶ್ರೀ ರಾಜರಾಜೇಶ್ವರಿ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇವರಿಗೆ ಅನುಜ್ಞಾ ಕಲಶಾಧಿವಾಸ, ಆಧಿವಾಸ ಹೋಮಗಳು ಅಂಕುರ ಪೂಜೆ-ಮಹಾಪೂಜೆ ನಡೆದವು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ ಬ್ರಹ್ಮಕಲಶೋತ್ಸವ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ವೇದಿಕೆಯಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮಾ. 6ರ ಸಂಜೆ ಫಯಾಝ್ಖಾನ್‌ ಮತ್ತು ಬಳಗ ದಿಂದ ಹಿಂದೂಸ್ಥಾನಿ ಗಾಯನ, ನಿಕೇತನ ಕೊಡವೂರು ಪ್ರಸ್ತುತ ವಿದ್ವಾನ್‌ ಸುಧೀರ್‌ ರಾವ್‌ ಕೊಡೆ ವೂರು ನಿರ್ದೇಶನದ ನೃತ್ಯ ವೈವಿಧ್ಯ, ಪೊಳಲಿಯ ಶ್ರೀ ಭಗವತೀ ತೀಯಾ ಸಮಿತಿಯಿಂದ ಯಕ್ಷಗಾನ ಜರಗಿತು.

ಇಂದಿನ ಕಾರ್ಯಕ್ರಮಗಳು
ಬ್ರಹ್ಮಕಲಶೋತ್ಸವದ ಐದನೇ ದಿನವಾದ ಇಂದು(ಮಾ.8)ರ ಬೆಳಗ್ಗೆ 6ರಿಂದ ಪುಣ್ಯಾಹ, ಗಣಹೋಮ, ದುರ್ಗಾಹೋಮ, ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀರಾಜರಾಜೇಶ್ವರಿ ದೇವರಿಗೆ ಅನುಜ್ಞಾ ಕಲಶಾಭಿಶೇಕ, ಅನುಜ್ಞಾ ಪ್ರಾರ್ಥನೆ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ. ಸಂಜೆ 5ರಿಂದ ಮಂಟಪ ಸಂಸ್ಕಾರ, ದುರ್ಗಾಪೂಜೆ, ಬ್ರಹ್ಮಕಲಶಕ್ಕೆ ಅಂಕುರಾರೋಪಣೆ, ಮೂಲಾಲಯದಲ್ಲಿ ಸಪ್ತಶುದ್ದಿ, ಪ್ರಾಸಾದಶುದಿ, ರಾಕ್ಷೊಘ್ನ ಹೋಮ, ಸಪರಿವಾರ ಶ್ರೀ ರಾಜರಾಜೇಶ್ವರಿ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಬಿಂಬಶುದ್ಧಿ, ಕಲಶಾವಾಸ, ಅವಾಸ ಹೋಮ, ಅರ್ಕುಳ ಶ್ರೀ ಉಳ್ಳಾಕ್ಲೂ ಮಗೃಂತಾಯ ದೈವಸ್ಥಾನದಲ್ಲಿ ಪ್ರಾಸಾದ ಶುದ್ಯಾದಿಗಳು, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜೈನಮಠ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಿರ್ವಚನ ನೀಡಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

LEAVE A REPLY

Please enter your comment!
Please enter your name here