Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

739
0
SHARE

ನಿಡ್ಪಳ್ಳಿ: ಇಲ್ಲಿಯ ಶ್ರೀ ಶಾಂತಾದುರ್ಗಾ ದೇವಸ್ಥಾನ, ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನಗಳ ಬ್ರಹ್ಮಕಲಶೋತ್ಸವ ಮಾ. 8ರಿಂದ ನಡೆಯಲಿದ್ದು, ಇದರ ಚಪ್ಪರ ಮುಹೂರ್ತ ರವಿವಾರ ಬೆಳಗ್ಗೆ ನಡೆಯಿತು.

ಉದ್ಯಮಿ ಅರುಣ್‌ ಕುಮಾರ್‌ ರೈ ಕೂವೆಂಜ ಚಪ್ಪರ ಮುಹೂರ್ತ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಹಿರಿಯರಾದ ದಾಮೋದರ ಭಟ್ ಪಳ್ಳು, ವಿಷ್ಣು ಭಟ್ ಬುಳೆನಡ್ಕ ನಿಡ್ಪಳ್ಳಿ ಗುತ್ತಿನ ಪ್ರವೀಣ್‌ ಕುಮಾರ್‌ ಆರಿಗ ಉಪಸ್ಥಿತರಿದ್ದರು. ತಿರುಪತಿ ಪುರೋಹಿತ ವಾಲ್ತಾಜೆ ಗಣೇಶ್‌ ಭಟ್ ಪೂಜಾ ವಿಧಿ – ವಿಧಾನ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಆರ್ಥಿಕ ಸಮಿತಿಯ ಸಂಚಾಲಕರೂ ಆಗಿರುವ ಅರುಣ್‌ ಕುಮಾರ್‌ ರೈ ಮಾತನಾಡಿ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಯಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಮಾತನಾಡಿ, ಇದುವರೆಗೆ ನಡೆದ ಜೀರ್ಣೋದ್ಧಾರ ಕೆಲಸ ಯಶಸ್ವಿ ಯಾಗಿದ್ದು, ಮುಂದೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಶಿವಪ್ಪ ಪೂಜಾರಿ ನುಳಿಯಾಲು, ಶಂಕರ ನಾರಾಯಣ ಭಟ್, ಚಪ್ಪರ ಸಮಿತಿ ಸಂಚಾಲಕ ಗಂಗಾಧರ ರೈ ಆನಾಜೆ, ಗಣೇಶ್‌ ಭಟ್ ಬಿರ್ನೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಗ್ರಾಮ ಮತ್ತು ನೆರೆ ಗ್ರಾಮದಲ್ಲಿ ವಿತರಣೆ ಮಾಡಲು ಪ್ರತಿ ಗ್ರಾಮಕ್ಕೆ ತಲಾ 5 ಜನರ ತಂಡ ರಚಿಸಿ ಜವಾಬ್ದಾರಿ ನೀಡಲಾಯಿತು. ಬಾಕಿ ಉಳಿದ ಜೀರ್ಣೋದ್ಧಾರ ಕೆಲಸವನ್ನು ತತ್‌ಕ್ಷಣ ಮುಗಿಸುವುದು ಮತ್ತು ಬ್ರಹ್ಮಕಲಶೋತ್ಸವ ತಯಾರಿ ಕೆಲಸಕ್ಕೆ ವೇಗ ನೀಡುವ ಬಗ್ಗೆ ಚರ್ಚಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್‌ ಸ್ವಾಗತಿಸಿದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ನಾಗೇಶ ಗೌಡ ಪುಳಿತ್ತಡಿ ವಂದಿಸಿದರು. ಕೆ.ಎನ್‌. ಪಾಟಾಳಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಊರ,ಪರವೂರ ಭಕ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here