ಬಂಟ್ವಾಳ : ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಾ. 18ರಂದು ಉದ್ಯಮಿ ಕೆಳಗಿನ ಅಗರಿ ಶ್ರೀ ರಾಜೇಶ್ ಶೆಟ್ಟಿ ಬಿಡುಗಡೆಗೊಳಿಸಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಸಪರಿವಾರ ಗೋಪಾಲಕೃಷ್ಣ ದೇವರ ಪುನಃಪ್ರತಿಷ್ಟಾಷ್ಟಬಂಧ ಬ್ರಹ್ಮಕಲಶೋತ್ಸವವವು ಎ. 23ರಿಂದ 29ರ ವರೆಗೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸಂಚಾಲಕ ಎನ್.ಆರ್. ಈಶ್ವರ ಭಟ್, ಪ್ರಧಾನ ಕಾರ್ಯ ದರ್ಶಿಗಳಾದ ವಿಜಯ ಶೆಟ್ಟಿ ಸಾಲೆತ್ತೂರು, ಚಿದಾನಂದ ರಾವ್ ಪತ್ತುಮುಡಿ, ಬಂಟ್ವಾಳ ಜೆಸಿಐ ಅಧ್ಯಕ್ಷ ದಯಾನಂದ ರೈ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ, ಜಯಂತಿ ಕೆ. ಶೆಟ್ಟಿ, ಲಕ್ಷ್ಮಣ ಮಂಚಿ, ನಳಿನಾಕ್ಷಿ ಕೋಕಲ, ಪದಾಧಿಕಾರಿಗಳಾದ ಸಂಜೀವ ಬೆಳ್ಚಾಡ ಮದನಾಜೆ, ಮಧುಸೂದನ ಭಟ್ ಕೈಯ್ಯೂರು, ಭಾಗೀರಥಿ ಮಂಚಿ, ಗೀತಾ ವಿ. ಬಂಗೇರ, ಹರ್ಷಿತ್ ಶೆಟ್ಟಿ ಮಂಚಿ, ಗೋಪಾಲ ಕುಂಟೂರು, ಅರ್ಚಕರಾದ ಸೂರ್ಯನಾರಾಯಣ ಭಟ್, ಶೇಖರ ಡಿ., ರಾಮಕೃಷ್ಣ ನಾಯಕ್ ಕೋಕಲ, ಸಿ.ಎಚ್. ವೆಂಕಪ್ಪ ಶೆಟ್ಟಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಜೀಪ ಮೂಡದ ಪದಾಧಿಕಾರಿಗಳು, ಸದಾನಂದ ಬಿ. ಬಂಗೇರ, ವಿಶ್ವನಾಥ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.