Home ಧಾರ್ಮಿಕ ಸುದ್ದಿ ಎಡಮಂಗಲ ದೇವಸ್ಥಾನ: ಬ್ರಹ್ಮಕಲಶೋತ್ಸವ

ಎಡಮಂಗಲ ದೇವಸ್ಥಾನ: ಬ್ರಹ್ಮಕಲಶೋತ್ಸವ

1378
0
SHARE

ಧಾರ್ಮಿಕ ಚೌಕಟ್ಟಿರಲಿ: ಒಡಿಯೂರು ಶ್ರೀ
ಕಡಬ: ಸೇವೆಯೇ ಪರಮ ಧರ್ಮ ಎನ್ನುವುದು ನಮ್ಮ ಸನಾತನ ನಂಬಿಕೆ. ಧಾರ್ಮಿಕ ಚೌಕಟ್ಟಿನೊಳಗೆ ಸನ್ಮಾರ್ಗದಲ್ಲಿ, ಶಾಂತಿಯುತವಾಗಿ ಬದುಕುವುದು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಬುಧವಾರ ರಾತ್ರಿ ಎಡಮಂಗಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗ ವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಬದುಕು ದೇವರು ನಮಗೆ ಕರುಣಿಸಿದ ಅತ್ಯಪೂರ್ವ ಕೊಡುಗೆ. ಅದನ್ನು ಸಾರ್ಥ ಕಗೊಳಿಸುವುದು ನಮ್ಮ ಕೈಯಲ್ಲೇ ಇದೆ. ಹುಟ್ಟು ಮತ್ತು ಸಾವಿನ ನಡುವಿನ ಅವಧಿಯಲ್ಲಿ ನಮ್ಮ ಬದುಕಿನ ರೀತಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಂಸ್ಕಾರಯುತ ಬದುಕು ಕಟ್ಟಿಕೊಳ್ಳುವುದು ನಮ್ಮೆಲ್ಲರ ಗುರಿಯಾಗಬೇಕು ಎಂದರು.

ಜನತೆಯ ಶ್ರದ್ಧೆ, ಭಕ್ತಿ
ಹಣವಿದ್ದರೆ ಸಾಲದು, ಅದರೊಂದಿಗೆ ಶ್ರದ್ಧೆ ಮತ್ತು ಭಕ್ತಿ ಇದ್ದರೆ ಮಾತ್ರ ಉನ್ನತ ಸಾಧ ನೆಗಳನ್ನು ಮಾಡಬಹುದು. ಎಡ ಮಂಗಲದ ಜನತೆಯ ಶ್ರದ್ಧೆ ಮತ್ತು ಭಕ್ತಿಯ ಫಲವಾಗಿ ಇಂತಹ ಭವ್ಯ ದೇಗುಲಗಳು ಎದ್ದುನಿಂತಿವೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಧಾರ್ಮಿಕ ಉಪನ್ಯಾಸ ನೀಡಿದ ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿಗಳು, ಧರ್ಮಾಧರ್ಮದ ವಿವೇಚನೆ ಇರುವುದು ಮನುಷ್ಯನಿಗೆ ಮಾತ್ರ. ಪರರಿಗೆ ಕೆಡುಕನ್ನು ಬಗೆಯದೆ ಒಳಿತನ್ನು ಮಾಡುವುದೇ ಧರ್ಮ. ಬದುಕು ರಾಮನ ನಡೆಯಂತಿರಲಿ, ರಾವಣನಂತಲ್ಲ ಎಂದರು.

2 ಲಕ್ಷ ರೂ. ಅನುದಾನ
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ, ದೇಗುಲಗಳ ಪುನರ್‌ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಭಕ್ತರ ತ್ಯಾಗ ಮತ್ತು ಶ್ರಮ ಅನನ್ಯವಾದುದು ಎಂದರು. ದೇವಾಲಯದ ಸಭಾ ಮಂಟಪಕ್ಕೆ ಜಿ.ಪಂ. ಸದಸ್ಯರ ನಿಧಿಯಿಂದ 2 ಲಕ್ಷ ರೂ. ಅನು ದಾನ ನೀಡುವುದಾಗಿ ಪ್ರಕಟಿಸಿದರು.

ದೇವರಕಾನ ಶ್ರೀಲಕ್ಷ್ಮೀ ನರಸಿಂಹ ದೇವ ಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಿಠಲ ರೈ ಪೋಳಾಜೆ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ನಿರ್ದೇಶಕ ಕೃಷ್ಣ ಪ್ರಸಾದ್‌ ಮಡ್ತಿಲ, ಎಪಿಎಂಸಿ ಸದಸ್ಯ ಸಂತೋಷ್‌ ಜಾಕೆ, ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ನಿವೃತ್ತ ಗ್ರಾಮ ಕರಣಿಕ ಬಾಲಕೃಷ್ಣ ರೈ ಬಾಳಿಲ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ಮೋಹಿನಿ ಚಂದ್ರ ಹಾಸ ಬಂಗೇರ, ಎಡಮಂಗಲ ಗ್ರಾಮ ಕರಣಿಕ ಬಸವರಾಜ್‌ ಅತಿಥಿಗಳಾಗಿ ಆಗಮಿಸಿದ್ದರು.

ದೈವ ನರ್ತಕನಿಗೆ ಸಮ್ಮಾನ
ದೇವಸ್ಥಾನದ ಪ್ರಧಾನ ದೈವ ನರ್ತಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೀನ ಪರವ ಅವರನ್ನು ಶ್ರೀಗಳು ಸಮ್ಮಾನಿಸಿ ಗೌರವಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಸಮಿತಿಯ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಕಾರ್ಯಾಧ್ಯಕ್ಷ ರಾಧಾಕೃಷ್ಣ ರೈ ಮಾಲೆಂಗ್ರಿ,

LEAVE A REPLY

Please enter your comment!
Please enter your name here