Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮಿತಿ ಪೂರ್ವಭಾವಿ ಸಭೆ

ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮಿತಿ ಪೂರ್ವಭಾವಿ ಸಭೆ

1807
0
SHARE

ಬಂಟ್ವಾಳ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಂಟ್ವಾಳ ತಾಲೂಕು ಹೊರೆಕಾಣಿಕೆ ಪೂರ್ವಭಾವಿ ಸಭೆ ಜ. 27ರಂದು ಸಂಜೆ ಬಿ.ಸಿ.ರೋಡ್‌ ರಂಗೋಲಿ ಸಭಾಂಗಣದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅಧ್ಯಕ್ಷತೆಯಲ್ಲಿ ನಡೆಯಿತು.

ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ರಾಷ್ಟ್ರದಲ್ಲಿ ಬೃಹತ್‌ ಗಾತ್ರದ ಮೃಣ್ಮಯ ಮೂರ್ತಿ ಹೊಂದಿರುವ ಏಕೈಕ ಕ್ಷೇತ್ರ ಪೊಳಲಿ. ಈ ಪುಣ್ಯ ಕಾರ್ಯದಲ್ಲಿ ವ್ಯಕ್ತಿ, ಪಕ್ಷ ಮುಕ್ತವಾಗಿ ಯಶಸ್ವಿಗೊಳಿಸುವ ಹೊಣೆ ನಮ್ಮೆಲ್ಲರದಾಗಿದೆ ಎಂದರು.

ಮಾ. 5: ಮೆರವಣಿಗೆ

ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿ, ತಾಲೂಕಿನ ಪ್ರತೀ ಗ್ರಾಮದಲ್ಲಿ ಹೊರೆಕಾಣಿಕೆ ಸಮಿತಿ ರಚಿಸಿ ಮಾ. 5ರಂದು ಸಂಜೆ 3ಕ್ಕೆ ಬಿ.ಸಿ.ರೋಡ್‌ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವಠಾರದಲ್ಲಿ ಒಟ್ಟಾಗಿ ಹಸುರುವಾಣಿ ಹೊರೆಕಾಣಿಕೆ ಸಂಗ್ರಹಿಸಿಕೊಂಡು 3.30ಕ್ಕೆ ಬಿ.ಸಿ.ರೋಡ್‌ ಮುಖ್ಯ ವೃತ್ತದಿಂದ ಕ್ಷೇತ್ರಕ್ಕೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಯನ್ನು ಕೊಂಡು ಹೋಗಲು ಸಜ್ಜಾಗುವಂತೆ ಸಲಹೆ ನೀಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಪುರಸಭಾ ಮಾಜಿ ಸದಸ್ಯ ಬಿ. ದೇವದಾಸ ಶೆಟ್ಟಿ, ಮಾತನಾಡಿ ಸಲಹೆ ನೀಡಿದರು.

ಸಭೆಯಲ್ಲಿ ನೋಂದಣಿ ಆಗದ ಗ್ರಾಮ ಮಟ್ಟದ ಸಮಿತಿಯನ್ನು ರಚಿಸುವುದಕ್ಕೆ ಕ್ರಮ ಕೈಗೊಳ್ಳಲು ಸಲಹೆ ವ್ಯಕ್ತವಾಯಿತು. ತಾಲೂಕಿನಾದ್ಯಂತ ಸಭೆ ಕರೆದು ಸ್ಥಳೀಯರಿಂದ ಹೊರೆಕಾಣಿಕೆ ಸಂಗ್ರಹಿಸುವ ಬಗ್ಗೆ ಜವಾಬ್ದಾರಿಯನ್ನು ಪ್ರಮುಖರಿಗೆ ವಹಿಸಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್‌, ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಮಚ್ಚೇಂದ್ರನಾಥ ಸಾಲ್ಯಾನ್‌, ರಾಮದಾಸ್‌ ಕೋಟ್ಯಾನ್‌, ಪತ್ರಕರ್ತ ಮೋಹನ ಕೆ., ಶ್ರೀಯಾನ್‌ ರಾಯಿ ಮೊದಲಾದವರು ಉಪಸ್ಥಿತರಿದ್ದರು.

ಹೊರೆಕಾಣಿಕೆ ಸಮಿತಿ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here