Home ಧಾರ್ಮಿಕ ಸುದ್ದಿ ಬ್ರಹ್ಮಕಲಶ: ವ್ರತಾಚರಣೆ ಸಂಕಲ್ಪಕ್ಕೆ ಚಾಲನೆ

ಬ್ರಹ್ಮಕಲಶ: ವ್ರತಾಚರಣೆ ಸಂಕಲ್ಪಕ್ಕೆ ಚಾಲನೆ

1654
0
SHARE

ಹೆಬ್ರಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಎ. 16ರಿಂದ 25ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ವ್ರತಾಚರಣೆ ಸಂಕಲ್ಪ ಸ್ವೀಕರಿಸುವ ಕಾರ್ಯಕ್ರಮಕ್ಕೆ ಫೆ. 22ರಂದು ಬೆಳಗ್ಗೆ 9ಗಂಟೆಗೆ ಜಾನಪದ ವಿದ್ವಾಂಸ ಕೆ.ಎಲ್‌. ಕುಂಡಂತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಫೆ. 26ರಿಂದ ಬ್ರಹ್ಮಕಲಶೋತ್ಸವದ ತನಕ 48 ದಿವಸ ವ್ರತಾಚರಣೆ ಸಂಕಲ್ಪದಲ್ಲಿ ದೇಗುಲದ ವ್ಯಾಪ್ತಿಗೆ ಬರುವ ವಿವಿಧೆಡೆಯಿಂದ ಭಾಗಿಯಾಗುವಂತೆ ಪ್ರಕಟನೆ ತಿಳಿಸಿದೆ.

ಹೆಬ್ರಿ , ಫೆ. 21: ಸುಮಾರು 800 ವರ್ಷಗಳಷ್ಟು ಹಳೆಯ ಪುರಾಣ ಪ್ರಸಿದ್ಧ ಉಡುಪಿ ತಾಲೂಕು ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಸುಮಾರು 25 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ಈಗಾಗಲೇ ಭರದಿಂದ ಸಾಗುತ್ತಿದ್ದು ಫೆ. 21ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಬೇಟಿ ನೀಡಿದರು. ದೇವಸ್ಥಾನ ನಿರ್ಮಾಣದ ಕನ್ಸ್‌ಲ್‌ಟೆಂಟ್‌ ಎಂಜಿನಿಯರ್‌ ಪ್ರಸಾದ್‌ ಶೆಟ್ಟಿ ಕುತ್ಯಾರು ಕಾಮಗಾರಿ ಬಗ್ಗೆ ವಿವರಿಸಿದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಿನಯಕುಮಾರ್‌ ಸೊರಕೆ, ಕಾರ್ಯಾಧ್ಯಕ್ಷ ಮಾಂಬೆಟ್ಟು ಗೋವರ್ಧನ ಹೆಗ್ಡೆ, ಅಧ್ಯಕ್ಷರಾದ ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ಡಾಂ ಬೀಡು ಹರ್ಷವರ್ಧನ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಅಂಜಾರು ಬೀಡು ಅಮರನಾಥ ಶೆಟ್ಟಿ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here