ಬ್ರಹ್ಮಾವರ : ಪೂರ್ವ ಜನ್ಮದ ಪುಣ್ಯದ ಫಲವಾಗಿ 84 ಲಕ್ಷ ಜೀವಿಗಳಲ್ಲಿ ಮನುಷ್ಯರಾಗಿ ಹುಟ್ಟಿ ದ್ದೇವೆ. ಭಕ್ತಿ, ಧರ್ಮದಿಂದ ಇದನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ವೇ| ಮೂ| ಉಮೇಶ ಬಾಯರಿ ಹೇಳಿದರು. ಅವರು ಗುರುವಾರ ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವ ಸ್ಥಾನದ ನಾಗಸನ್ನಿಧಿಯಲ್ಲಿ ಶ್ರೀ ನಾಗದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಪ್ರಯುಕ್ತ ಆಶೀರ್ವದಿಸಿದರು.
ಅಪೇಕ್ಷೆ ಇಲ್ಲದೆ ಮಾಡಿದ ಕರ್ಮ ಸಾರ್ಥಕವಾಗುತ್ತದೆ ಎಂದರು. ಇದೇ ಸಂದರ್ಭ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮಹಾರಾಜರಾದ ಪದ್ಮನಾಭ ವರ್ಮರನ್ನು ಗೌರವಿಸಲಾಯಿತು. ನಿವೃತ್ತ ಖಜಾನೆಯ ನಿರ್ದೇಶಕ ಕೆ.ಕೆ. ನಾಯಕ್, ಉಪನ್ಯಾಸಕ ಚಂದ್ರ ಕುಮಾರ್, ರಾಮು ಬಿ. ಉಪಸ್ಥಿತರಿದ್ದರು.
ಅರ್ಚಕ ಅನಂತಪದ್ಮನಾಭ ಸ್ವಾಗತಿಸಿ, ಗಣೇಶ್ ರಾವ್ ವಂದಿಸಿದರು. ಡಾ| ರಾಘವೇಂದ್ರ ರಾವ್ ನಿರೂಪಿಸಿದರು. ನಾಗ ಸನ್ನಿಧಿಯಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಾಗ ಸಂದರ್ಶನ, ಪಲ್ಲಪೂಜೆ, ವಟುಬ್ರಾಹ್ಮಣ, ಸುವಾಸಿನಿ, ಕನ್ಯಕಾ ಆರಾಧನೆ, ಶ್ರೀ ಮಾಸ್ತಿ ಅಮ್ಮನವರ ಸನ್ನಿಧಿಯಲ್ಲಿ ಚಂಡಿಕಾಯಾಗ, ಬ್ರಹ್ಮಕಲಶಾಭಿಷೇಕ, ಅನ್ನಸಂತರ್ಪಣೆ ಜರಗಿತು.