Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವ -ನಾಗಮಂಡಲ ಸಂಪನ್ನ

ಬ್ರಹ್ಮಕಲಶೋತ್ಸವ -ನಾಗಮಂಡಲ ಸಂಪನ್ನ

1282
0
SHARE

ಉಡುಪಿ : ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ದೇವತಾರಾಧನೆ, ಕಲಾರಾಧನೆ ,  ಅನ್ನಾರಾಧನೆ ನಡೆಯುತ್ತಿದ್ದು, ಇದು ಮೂರು ಆರಾಧನೆಗಳ ಸಂಗಮ ಕ್ಷೇತ್ರ. ಈ ನೆಲೆಯಲ್ಲಿ ಕ್ಷೇತ್ರವು ಉತ್ತುಂಗಕ್ಕೇರುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು. ದೊಡ್ಡಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸಂಪನ್ನಗೊಂಡ ಬ್ರಹ್ಮಕಲಶೋತ್ಸವ – ನಾಗಮಂಡಲೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಆದಿಶಕ್ತಿ ಎಲ್ಲ ಶಕ್ತಿಗಳ ಮೂಲ, ಆಕೆ ಜಗನ್ಮಾತೆ. ಆಕೆಯ ಮಡಿಲಲ್ಲಿ ನಾವೆಲ್ಲ ಶಿಶುಗಳು. ಜಗದಂಬೆಯಾದ ಆಕೆಯನ್ನು ನಾವು ಆರಾಧಿಸಬೇಕೇ ಹೊರತು ಜಗಳಗಂಟರಾಗಬಾರದು. ಇಲ್ಲಿನ ದಾರುಶಿಲ್ಪ, ಕಲಾಶಿಲ್ಪ ಕಲಾತ್ಮಕವಾಗಿ ಮೂಡಿ ಬಂದಿರುವ ಸುತ್ತುಪೌಳಿ ಮಾತೆಯ ಅನುಗ್ರಹದಿಂದಲೇ ಸಾಧ್ಯವಾಗಿದೆ ಎಂದರು.
ದುರ್ಗಾದಿಶಕ್ತಿ, ಪರಿವಾರ ದೇವರಿಗೆ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದಿಂದ ಶ್ರೀಪಾದರ ಪಾದಪೂಜೆ ನೆರವೇರಿಸಲಾಯಿತು.  ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ದಂಪತಿ, ಉಸ್ತುವಾರಿ ಕುಸುಮಾ ನಾಗರಾಜ್‌ ದಂಪತಿ, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here