Home ಧಾರ್ಮಿಕ ಸುದ್ದಿ ಎಡಮಂಗಲದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಎಡಮಂಗಲದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

1896
0
SHARE

ಕಡಬ : ಎಡಮಂಗಲದ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿಧಿ ವಿಧಾನಗಳಿಗೆ ರವಿವಾರ ಸಂಭ್ರಮದ ಚಾಲನೆ ದೊರೆತಿದೆ. ರವಿವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಊರ ಹಾಗೂ ಪರವೂರ ಭಕ್ತರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

ಸಂಜೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನ ಮಂಡಳಿಯ ಸದಸ್ಯರಿಂದ ಭಜನೆ ನೆರವೇರಿತು. ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿ ಕೊಳ್ಳ ಲಾಯಿತು. ರಾತ್ರಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗÌರಣ, ಪ್ರಾಸಾದ ಪರಿಗ್ರಹ, ಪ್ರಾಸಾದ ಶುದ್ಧಿ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ ನಡೆದು ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ಸೋಮವಾರ ಬೆಳಗ್ಗಿನಿಂದಲೇ ಉಷಾಃ ಪೂಜೆ, ಗಣಪತಿ ಹೋಮ ಸಹಿತ ವೈದಿಕ ಕಾರ್ಯಕ್ರಮಗಳು ಜರಗಿದವು. ಮಧ್ಯಾಹ್ನ ಹೋಮ, ಕಲಶಾಭಿಷೇಕ ಬಳಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸಂಜೆ ಚಾರ್ವಾಕದ ಕೆಳಗಿನಕೇರಿ ಕೊಪ್ಪ ಶ್ರೀ ಶಾರದಾಂಬ ಭಜನ ಮಂಡಳಿ ಹಾಗೂ ಪುಣcತ್ತಾರು ಶ್ರೀಹರಿ ಭಜನ ಮಂಡಳಿಯ ಸದಸ್ಯರಿಂದ ಭಜನೆ ನೆರವೇರಿತು. ಬಳಿಕ ಧಾರ್ಮಿಕ ಸಭೆ ನಡೆದು ರಾತ್ರಿ ಮನೋರಂಜನ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here