ಸುರತ್ಕಲ್: ಕಟ್ಲ ಶ್ರೀ ಅಬ್ಬಗದಾರಗ ಕ್ಷೇತ್ರದಲ್ಲಿ ಮಾ. 8ರಂದು ನಡೆಯಲಿರುವ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡ ಲೋತ್ಸವ ಪ್ರಯುಕ್ತ ಸೋಮವಾರ ಉಗ್ರಾಣ ಮುಹೂರ್ತ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರದವು.
ಕಟೀಲು ಶ್ರೀ ವಾಸುದೇವ ಆಸ್ರಣ್ಣ ಉದ್ಘಾಟಿಸಿ ಮಾತಾಡಿ, ಬ್ರಹ್ಮ ಕಲಶೋತ್ಸವ, ನಾಗಮಂಡಲೋತ್ಸವ ದಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಊರಿನ ಪರವೂರಿನ ಭಕ್ತರೆಲ್ಲ ಸೇರಿ ಮಾಡಿದಾಗ ಸರ್ವರಿಗೂ ದೈವ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಕುಡುಪು ಕೃಷ್ಣರಾಜ ತಂತ್ರಿ ಮಾತ ನಾಡಿ, ಕಾರಣಿಕ ಕ್ಷೇತ್ರವಾದ ಇಲ್ಲಿ ಜೀರ್ಣೋದ್ಧಾರವಾಗಿ ದೈವಾಲಯ ಉತ್ತಮವಾಗಿ ಮೂಡಿ ಬಂದಿದ್ದು ಸದಾ ಭಕ್ತರಿಗೆ ಸಿರಿಗಳು, ಉಳ್ಳಾಯ ಪರಿವಾರ ದೈವಗಳು ಸದಾ ಹರಸುತ್ತಾ ಭಕ್ತರ ಇಷ್ಟಾರ್ಥ ಈಡೇರಿಸುವಂತಾಗಲಿ ಎಂದರು.
ಇಡ್ಯಾ ಮಹಾಲಿಂಗೇಶ್ವರ ದೇವ ಸ್ಥಾನದ ವೇ| ಮೂ| ಐ. ರಮಾನಂದ ಭಟ್, ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ಮನಪಾ ಸದಸ್ಯ ಗುಣಶೇಖರ ಶೆಟ್ಟಿ, ಅಗರಿ ರಾಘವೇಂದ್ರ ರಾವ್, ಕಟ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀಧರ ಶೆಟ್ಟಿ, ಕ್ಷೇತ್ರದ ಅರ್ಚಕ ಲಕ್ಷ್ಮೀ ನಾರಾಯಣ ಭಟ್, ಭೋಜ ಹೆಗ್ಡೆ, ಸಾಧು ಶೆಟ್ಟಿ, ಕೆ. ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ, ನ್ಯಾಯವಾದಿ ನಾರಾಯಣ ಪಾಟಾಳಿ ಸ್ವಾಗತಿಸಿದರು. ಶಂಕರ ನಾರಾಯಣ ಮೈರ್ಪಾಡಿ ವಂದಿಸಿದರು.
ಇಂದು ಚಂಡಿಕಾ ಯಾಗ
ಮಾ. 6ರಂದು ನಾಗಬನದಲ್ಲಿ ಚಂಡಿಕಾ ಯಾಗ, ಬ್ರಹ್ಮ ಪರಿವಾರಗಳಿಗೆ ಕಲಶಾಭಿಷೇಕ, ಆಶ್ಲೇಷಾ ಬಲಿ, ಸಂಜೆ 4ರಿಂದ ಭಜನೆ, ಸಂಜೆ ಧಾಮಿಕ ಸಭಾ ಕಾರ್ಯಕ್ರಮ, 7ರಿಂದ ನೃತ್ಯಾಮೃತಂ, ನೃತ್ಯ ಸಿಂಚನ ಕಾರ್ಯಕ್ರಮ ಜರಗಲಿದೆ.