ಪೆರುವಾಯಿ : ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಬ್ರಹ್ಮಕಲಶ ಸಂಭ್ರಮದ ಪೂರ್ವಸಿದ್ಧತೆ ಸಭೆ ನಡೆಯಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ, ದೇಗುಲ ನಿರ್ಮಾಣದ ಕಾರ್ಯ ಮಹತ್ವದ್ದಾಗಿದೆ. ಈ ದೇಗುಲದ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡು, ಬ್ರಹ್ಮಕಲಶ ಸಂಭ್ರಮ ಯಶಸ್ವಿಯಾಗಬೇಕು. ಅದಕ್ಕೆ ಗುರುಬಲ, ದೈವಬಲ ಕೂಡಿಬರಬೇಕು ಎಂದು ಆಶೀರ್ವಚಿಸಿದರು.
ಟ್ರಸ್ಟಿಗಳಾದ ಸಚಿನ್ ಅಡ್ವಾಯಿ, ವೆಂಕಪ್ಪ ಮಾರ್ಲ ಕೆ., ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಮನೋಹರ ಶೆಟ್ಟಿ ಪೇರಡ್ಕ, ಚಂದ್ರಹಾಸ ಕಾವ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬಂಟ್ವಾಳ ತಾ| ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಕ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ರೈ ಅಡ್ವಾಯಿ ಸ್ವಾಗತಿಸಿದರು. ಸವಿತಾ ಭಟ್ ಅಡ್ವಾಯಿ ಪ್ರಸ್ತಾವಿಸಿದರು. ಕೋಶಾಧಿಕಾರಿ ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು. ಮಂಜುನಾಥ ಶೆಟ್ಟಿ ಕಲಾೖತ್ತಿಮಾರು ಮತ್ತು ಮಧುಸೂದನ ಕೆ. ನಿರೂಪಿಸಿದರು. ಇದೇ ಸಂದರ್ಭ ಶ್ರೀ ದೇವರಿಗೆ ಕಲೊ³àಕ್ತ ಪೂಜೆ ನೆರವೇರಿಸಲಾಯಿತು.
ಬ್ರಹ್ಮಕಲಶ ಡಿ. 25ರಿಂದ 29ರ ವರೆಗೆ ಬ್ರಹ್ಮಕಲಶ ನಡೆಸಲು ತೀರ್ಮಾನಿಸಲಾಯಿತು. ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷರಾಗಿ ಒಡಿಯೂರು ಶ್ರೀ ಹಾಗೂ ಅವರ ನೇತೃತ್ವದಲ್ಲಿ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.