Home ಧಾರ್ಮಿಕ ಸುದ್ದಿ ಪೊಳಲಿ ಕ್ಷೇತ್ರದ ಬ್ರಹ್ಮಕಲಶ: ಇಂದು ಅರ್ಕುಳದಿಂದ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ

ಪೊಳಲಿ ಕ್ಷೇತ್ರದ ಬ್ರಹ್ಮಕಲಶ: ಇಂದು ಅರ್ಕುಳದಿಂದ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ

419
0
SHARE

ಬಂಟ್ವಾಳ : ಶ್ರೀಕ್ಷೇತ್ರ ಪೊಳಲಿಯ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಅರ್ಕುಳದಿಂದ ಪೊಳಲಿಗೆ ಶ್ರೀ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ ಮಾ. 8ರಂದು ನಡೆಯಲಿದೆ. ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ಶ್ರೀಕ್ಷೇತ್ರ ಪೊಳಲಿಯ ಬ್ರಹ್ಮಕಲಶಾಭಿಷೇಕ ಸಂದರ್ಭ ಮಾ. 13ರಂದು ರಾತ್ರಿ ನೇಮ ಸೇವೆ ಸಂಪನ್ನಗೊಳ್ಳಲಿದೆ.

ಶ್ರೀ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ ಮಾ. 8ರಂದು ಬೆಳಗ್ಗೆ 6.30ಕ್ಕೆ ಅರ್ಕುಳ ಬೀಡಿನಿಂದ ಹೊರಟು ಮೇರಮಜಲು, ಕುಟ್ಟಿಕಳ, ತೇವುಕಾಡು, ಮಹಮ್ಮಾಯಿ ಕಟ್ಟೆ,
ಅಮ್ಮುಂಜೆ, ಬಡಕಬೈಲು, ಪುಂಚಮೆ ಮಾರ್ಗವಾಗಿ ಬೆಳಗ್ಗೆ 11.30ಕ್ಕೆ ಶ್ರೀ ಕ್ಷೇತ್ರ ಪೊಳಲಿ ತಲುಪಲಿದೆ. ಮಾ. 14ರಂದು ಮಹಾ ಸಂಪ್ರೋಕ್ಷಣೆಯ ಅನಂತರ ಅಪರಾಹ್ನ 3ಕ್ಕೆ ಪೊಳಲಿಯಿಂದ ಹೊರಟು ಬಡಕಬೈಲು, ಧನುಪೂಜೆ, ಕಲ್ಪನೆ, ನೆತ್ರೆಕೆರೆ, ಕಡೆಗೋಳಿ, ಫರಂಗಿಪೇಟೆ ಮಾರ್ಗವಾಗಿ ಸಂಜೆ 6ಕ್ಕೆ ಅರ್ಕುಳ ಬೀಡು ತಲುಪಲಿದೆ ಎಂದು ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಕ್ಷೇತ್ರದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here