Home ಧಾರ್ಮಿಕ ಸುದ್ದಿ ಕುಡುಪು ದೇಗುಲದಲ್ಲಿ ಬ್ರಹ್ಮ ಕಲಶೋತ್ಸವ: ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ

ಕುಡುಪು ದೇಗುಲದಲ್ಲಿ ಬ್ರಹ್ಮ ಕಲಶೋತ್ಸವ: ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ

430
0
SHARE
ಹೊರೆಕಾಣಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮಹಾನಗರ: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರವಿವಾರ ಹೊರೆಕಾಣಿಕೆ ಮೆರವಣಿಗೆಯ ಉದ್ಘಾಟನೆ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ರಾಜಕೀಯ ಬದಿಗಿಟ್ಟು ದೇವತಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಎಂದು ಅವರು ಹೇಳಿದರು.

ಮೆರವಣಿಗೆ
ಹೊರೆಕಾಣಿಕೆ ಮೆರವಣಿಗೆಯು ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕೇಂದ್ರ ಮೈದಾನಕ್ಕೆ ತೆರಳಿತು. ಅಲ್ಲಿಂದ ಜ್ಯೋತಿ ವೃತ್ತ ಮೂಲಕ ಬಂಟ್ಸ್‌ ಹಾಸ್ಟೆಲ್‌, ಕದ್ರಿ, ನಂತೂರು, ಬಿಕರ್ನಕಟ್ಟೆ, ಕೈಕಂಬ, ಕುಲಶೇಕರ ಚೌಕಿ ಬೈತುರ್ಲಿಯಾಗಿ ಕುಡುಪು ಕ್ಷೇತ್ರಕ್ಕೆ ಆಗಮಿಸಿತು.

ಮೆರವಣಿಗೆಯಲ್ಲಿ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಉಪ ಕೇಂದ್ರಗಳಾದ ಶ್ರೀ ಮಂಗಳಾದೇವಿ ದೇವಸ್ಥಾನ, ಶ್ರೀ ಬ್ರಹ್ಮ ಬೈದರ್ಕಳ, ಗರಡಿ ಕ್ಷೇತ್ರ ಕಂಕನಾಡಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ, ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರ ಕೊಲ್ಯ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶ್ರೀ ಜಯರಾಮ ಭಜನ ಮಂದಿರ ಯೆಯ್ನಾಡಿ, ಶ್ರೀ ದುರ್ಗಾಕಟ್ಟೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದವಿನಂಗಡಿ, ಶ್ರೀ ಸುಬ್ರಹ್ಮಣ್ಯ ಭಜನ ಮಂದಿರ ಕುಲಶೇಖರ, ಶ್ರೀ ಸುಬ್ರಹ್ಮಣ್ಯ ಭಜನ ಮಂದಿರ ನೀರುಮಾರ್ಗ, ಹತ್ತು ಸಮಸ್ತರು ಬೈತುರ್ಲಿ ಅವರಿಂದ ಶ್ರೀ ಕ್ಷೇತ್ರ ಕುಡುಪು ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆಯಾಗಿದೆ.

ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌, ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಶರಣ್‌ ಪಂಪ್‌ವೆಲ್‌ ಸಹಿತ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಭಾವೈಕ್ಯ ಮೆರೆದರು
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಯಲ್ಲಿ ಕ್ರೈಸ್ತ ಬಾಂಧವರು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಿಲಿಕುಮೇರಿ, ಕುಡುಪು, ಕುಲಶೇಖರ ಸೇರಿದಂತೆ ವಿವಿಧೆಡೆಯಯ ಕ್ರೈಸ್ತ ಬಾಂಧವರು ಕೂಡ ಕುಡುಪು ದೇಗುಲಕ್ಕೆ ಹೊರೆಕಾಣಿಕೆ ಸಮರ್ಪಿಸಿ ಭಾವೈಕ್ಯ ಮೆರೆದರು.

30ಕ್ಕೂ ಹೆಚ್ಚಿನ ವಾಹನ
ಇದೇ ವೇಳೆ ಸುಮಾರು 30ಕ್ಕೂ ಹೆಚ್ಚಿನ ವಾಹನಗಳು ಹೊರೆಕಾಣಿಕೆ ಮೆರವಣಿಯಲ್ಲಿದ್ದವು. ಭಕ್ತರು ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಗೋಧಿ ಕಡಿ, ಉದ್ದ ಮೆಣಸು, ತೊಗರಿಬೇಳೆ, ಮೈದಾ, ಸಕ್ಕರೆ, ತೆಂಗಿನ ಎಣ್ಣೆ, ಬಿಳಿ ಕಡಲೆ, ಅವಲಕ್ಕಿ, ಉಪ್ಪು, ಸೀಯಾಳ, ಹಿಂಗಾರ, ಫಲ ವಸ್ತುಗಳು ಸಹಿತ ದಿನಸಿ ಸಾಮಗ್ರಿಗಳನ್ನು ಹೊರೆಕಾಣಿಯಾಗಿ ಸಮರ್ಪಿಸಿದ್ದರು.

LEAVE A REPLY

Please enter your comment!
Please enter your name here