Home ಧಾರ್ಮಿಕ ಸುದ್ದಿ ಬ್ರಹ್ಮಬೈದರ್ಕಳ ನೇಮ ಸಂಪನ್ನ

ಬ್ರಹ್ಮಬೈದರ್ಕಳ ನೇಮ ಸಂಪನ್ನ

389
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ಶ್ರೀ ಕೊಡಮಣಿತ್ತಾಯ, ಕಲ್ಕುಡ-ಕಲ್ಲುರ್ಟಿ, ಬ್ರಹ್ಮಬೈದರ್ಕಳ ಗರೋಡಿ ದೈವಸ್ಥಾನದಲ್ಲಿ ಬ್ರಹ್ಮಬೈದರ್ಕಳ ನೇಮ ಗುರುವಾರ ಸಂಪನ್ನಗೊಂಡಿತು.

ಪೆಜಕ್ಕಳ ಗಂಗಾಧರ ಕಕೃಣ್ಣಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಜ. 23ರಂದು ಬೆಳಗ್ಗೆ ಗರಿಕೆಗೆ ಭತ್ತ ಹಾಕುವುದು, ರಾತ್ರಿ ಬೈದರ್ಕಳು ಒಲಿ ಮರೆಯಿಂದ ಹೊರಟು ಬ್ರಹ್ಮಬೈದರ್ಕಳ ನೇಮ ನಡೆಯಿತು. ಕೋಟಿ-ಚೆನ್ನಯರು ಬಾಕಿಮಾರಿಗೆ ಇಳಿಯುವುದು, ದೇವರ ಬಲಿ ಹೊರಟು ಉತ್ಸವ, ಬೈದರ್ಕಳು ಸುರ್ಯ ಹಾಕುವುದು, ಮಾಯಂದಾಲೆ ನೇಮ, ಅನ್ನಸಂತರ್ಪಣೆ ನಡೆಯಿತು. ಗುರುವಾರ ಬೆಳಗ್ಗೆ ಧ್ವಜಾವರೋಹಣ, ಕುರುಸಂಬಿಲ ನೇಮ, ಬಳಿಕ ಭಂಡಾರ ನಿರ್ಗಮಿಸಿತು.

ಜಿ.ಪಂ. ಸದಸ್ಯ ಪದ್ಮಶೇಖರ ಜೈನ್‌, ಕಕ್ಯಪದವು ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್‌ ಶೆಟ್ಟಿ ವಿಜಯ ನಗರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್‌ ಗಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿನಾಯಕ ಪ್ರಭು, ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಉತ್ಸವ ಸಮಿತಿ ಗೌರವಾಧ್ಯಕ್ಷ ವೀರಪ್ಪ ಶೆಟ್ಟಿ ಕಂಚಾರು, ಅಧ್ಯಕ್ಷ ಕಾಂತಪ್ಪ ಶೆಟ್ಟಿ ಪಡ್ಲೊಟ್ಟು, ಕಾರ್ಯದರ್ಶಿ ಕೊರಗಪ್ಪ ಶೆಟ್ಟಿ ತಿರ್ಮಲೊಟ್ಟು, ಧ್ವಜಸ್ತಂಭ ನಿರ್ಮಾಣ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಕಾರ್ಯ ದರ್ಶಿ ಮಾಧವ ಪೂಜಾರಿ ಕುಲ್ಲಾಲ್‌, ಮುಂಬೈ ಸಮಿತಿ ಅಧ್ಯಕ್ಷ ಗಣೇಶ್‌ ಶೆಟ್ಟಿ, ಕಾರ್ಯ ದರ್ಶಿ ಸುರೇಶ್‌ ಶೆಟ್ಟಿ, ವ್ಯವಸ್ಥಾಪನ ಸಮಿತಿ, ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here