Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

2057
0
SHARE

ಮಹಾನಗರ: ದೇವರ ಕೆಲಸದಲ್ಲಿ ಜನರಿಗೆ ನಂಬಿಕೆ ಇರಬೇಕು. ನಂಬಿಕೆಯ ಶ್ರಮದಿಂದ ದೇವಾಲ ಯಗಳ ಅಭಿವೃದ್ಧಿಯಾದಾಗ ಫಲ ಪ್ರಾಪ್ತಿಯಾಗುತ್ತದೆ ಎಂದು ನಗರದ ಶ್ರೀ ಚಂದ್ರಕಾವಿ ಮಠ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ ಹೇಳಿದರು.

ಕ್ಷೇತ್ರದ ಬ್ರಹ್ಮಕಲಶೋತ್ಸವದ ಆಮಂ ತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ್‌ ಹೆಗ್ಡೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ದೈವ- ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋ ತ್ಸವದಂತ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ನಡೆಯಲು ಜನರು ದೇವರ ಮೇಲೆ ಇಟ್ಟ ಭಕ್ತಿ ನಂಬಿಕೆಗಳು ಕಾರಣ ಎಂದರು.

ಸರ್ವತೋಮುಖ ಅಭಿವೃದ್ಧಿ
ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ತಾರಾನಾಥ್‌ ಶೆಟ್ಟಿ ಮಾತನಾಡಿ, ಬೋಳಾರಿನ ದೈವ-ದೇವಸ್ಥಾನಗಳು ಜೀರ್ಣೋದ್ಧಾರಗೊಂಡರೆ ಪರಿ ಸರವು ಅಭಿವೃದ್ಧಿಗೊಂಡು ಜನರ ಸರ್ವತೋಮುಖ ಬೆಳವಣಿಗೆ ಸಾಧ್ಯ. ಪರಶುರಾಮ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಎಡೆಬಿಡದೆ ನಡೆ ಯುತ್ತಿ¤ವೆ ಎಂದರು.

ಸಮಾರಂಭದಲ್ಲಿ ಸಂತೋಷ್‌ ರೈ, ರಸಿಕಾ ಹರ್ಷವರ್ಧನ್‌ ರೈ, ಪುರುಷೋ ತ್ತಮ್‌ ಭಂಡಾರಿ, ವೇಣುಗೋಪಾಲ್‌ ಪುತ್ರನ್‌, ಪರೀಕ್ಷಿತ್‌ ರೈ, ಪ್ರಮೀತ್‌ ರೈ, ರತ್ನಾವತಿ ಎಸ್‌. ರೈ, ಕಾವ್ಯಶ್ರೀ ರೈ, ಲೋಕೇಶ್‌ ಉಳ್ಳಾಲ್‌, ಸುನೀಲ್‌ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಕದ್ರಿ ನವನೀತ್‌ ಶೆಟ್ಟಿ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಬಗ್ಗೆ ಪ್ರಾಸ್ತಾವಿಸಿದರು. ರವಿರಾಜ್‌ ಮಂಗಳಾದೇವಿ ಸ್ವಾಗತಿಸಿ, ದಿಲ್‌ರಾಜ್‌ ಆಳ್ವ ವಂದಿಸಿದರು. ಪ್ರ. ಕಾರ್ಯದರ್ಶಿ ಪ್ರದೀಪ್‌ ಆಳ್ವ ನಿರೂಪಿಸಿದರು.

LEAVE A REPLY

Please enter your comment!
Please enter your name here