ಕಡಬ : ಕೊಂಬಾರು ಗ್ರಾಮದ ಬೊಟ್ಟಡ್ಕದಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ನೇಮ ಸಮಿತಿ ಮತ್ತು ಶ್ರೀ ಬ್ರಹ್ಮಮೊಗೇರ್ಚಾ ರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ ಹಾಗೂ ನೇಮ ಜರಗಿತು.
ಗೋಳಿತೊಟ್ಟು, ಬೈಲೂರು ಶ್ರೀ ದುರ್ಗಾಂಬಿಕಾ ನಿಲಯದ ಜ್ಯೋತಿಷ್ಯ ಕೊರಗಪ್ಪ ಮೊಗೇರ ಅವರ ನೇತೃತ್ವದಲ್ಲಿ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ ನಡೆದು, ಗಣಹೋಮ,ಪೂಜಾವಿಧಿ ವಿಧಾನಗಳು ನಡೆಯಿತು. ಸಂಜೆ ಬೊಟ್ಟಡ್ಕ ಶ್ರೀ ಬ್ರಹ್ಮ ಮೊಗೇರ್ ಸಾಂಸ್ಕೃತಿಕ ಕಲಾ ತಂಡದಿಂದ ನೃತ್ಯೋತ್ಸವ ಜರಗಿತು. ರಾತ್ರಿ ಶ್ರೀ ಮೊಗೇರ್ಕಳ ದೈವಗಳ ಭಂಡಾರ ಬಂದು ನೇಮ ನಡೆಯಿತು. ಮರುದಿನ ಬೆಳಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮ ನಡೆದು ಹರಕೆ ಸಲ್ಲಿಸಿ ಪ್ರಾರ್ಥಿಸಿಕೊಳ್ಳಲಾಯಿತು.
ಸಭೆ, ಸಮ್ಮಾನ ರಾತ್ರಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲೂರು ಜೋತಿಷ ಕೊರಗಪ್ಪ ಮೊಗೇರ, ದೈವ ಮತ್ತು ದೇವರ ಮೇಲಿನ ಭಕ್ತಿಯಿಂದ ಮಾನವ ಜೀವನಕ್ಕೆ ಮಾರ್ಗದರ್ಶನ ಲಭಿಸುತ್ತಿದೆ. ಭಯ-ಭಕ್ತಿಯಿಂದ ನಂಬಿದವರಿಗೆ ಸದಾ ಇಂಬು ಕೊಡುವ ದೈವಗಳ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಉತ್ತಮ
ಬೆಳವಣಿಗೆ ಎಂದು ಹೇಳಿದರು.
ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಗುಂಡು ಮತ್ತು ಚಕ್ರ ಎಸೆತಗಾರ ಮೊಗೇರಡ್ಕ ಹಿ.ಪ್ರಾ. ಶಾಲಾ ವಿದ್ಯಾರ್ಥಿ ಕಾಪಾರು ಚಂದ್ರಾವತಿ ಮತ್ತು ಈಶ್ವರ ಗೌಡ ದಂಪತಿ
ಪುತ್ರ ರೀತೇಶ್ ಕೆ.ಐ. ಅವರನ್ನು ಸಮಿತಿಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ಸಮಿತಿ ಸಂಚಾಲಕ ಶಶಿಧರ್ ಬೊಟ್ಟಡ್ಕ, ಗೌರವಾಧ್ಯಕ್ಷ ಮಾಂಕು ಮೊಗೇರ, ಪರಿಚಾರಕ ಜನಾರ್ದನ ಬೊಟ್ಟಡ್ಕ, ತಿಪ್ಪ ಮೊಗೇರ ಕನ್ ಕಲ್, ಭರತ್ ಕನ್ಕಲ್, ಕುಶಾಲಪ್ಪ
ಕೂಜಿಗೋಡು, ಜರ್ನಾದನ, ಅಣ್ಣಿ ಬಲ್ಯ, ನೂಜಿಬಾಳ್ತಿಲ ಕುಬುಲಾಡಿ ಆದಿ ಮೊಗೇರ್ಕಳ ನೇಮ ಸಮಿತಿಯ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ, ಶಿಕ್ಷಕ ಕಮಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.