ಪಡುಬಿದ್ರಿ: ಪುರಾಣ ಪ್ರಸಿದ್ಧ ಬೊಲ್ಯೊಟ್ಟು ಆಲಡೆ – ಬೆಳ್ಳಿಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಆಯೋನೋತ್ಸವ ಮಂಗಳವಾರದಂದು ಜರಗಿತು.
ಈ ಪ್ರಯುಕ್ತ ಕ್ಷೇತ್ರ ತಂತ್ರಿ ವೇ| ಮೂ| ಸಜೆ ಹರೀಶ ಜೋಯಿಸರ ನೇತೃತ್ವ ಹಾಗೂ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ಟರ ಸಹಕಾರದಲ್ಲಿ ಮಂಗಳವಾರದಂದು ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ದೇವನಾಂದಿ, ಪ್ರಧಾನ ಯಾಗ, ಕಲಶಾಭಿಷೇಕ, ಮಹಾಗಣಪತಿ ಹೋಮ ಇತ್ಯಾದಿ ಧಾರ್ಮಿಕ ಪ್ರಕ್ರಿಯೆಗಳು ನಡೆದು ಧ್ವಜಾರೋಹಣ, ಮಹಾಪೂಜೆ, ಅನಂತರ ಅನ್ನಸಂತರ್ಪಣೆ ನಡೆದವು.
ಶ್ರೀಕ್ಷೇತ್ರದ ಗೌರವಾಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ, ಆಡಳಿತ ಮೊಕ್ತೇಸರ ಎಲ್ಲೂರುಗುತ್ತು ಯುವರಾಜ ಶೆಟ್ಟಿ, ಪವಿತ್ರಪಾಣಿಗಳು, ಮೊಕ್ತೇಸರರಾದ ಕೇಂಜ ಶ್ರೀಧರ ತಂತ್ರಿ, ಅನಂತಪದ್ಮನಾಭ ಜೆನ್ನಿ ಕೆಮುಂಡೇಲು, ಸುದೇಶ್ ಶೆಟ್ಟಿ. ಭೋಜ ಶೆಟ್ಟಿ ಕೊಳಚೂರುಗುತ್ತು, ಉಮೇಶ್ ಕೋಟ್ಯಾನ್, ಕೊಳಚೂರು ದಿವಾಕರ ಭಟ್, ಗಣೇಶ್ ಭಟ್ ಬೊಳ್ಯೊಟ್ಟು, ಹೇಮನಾಥ ಶೆಟ್ಟಿ ಅಡ್ವೆ, ಸಂತೋಷ್ ಬೊಳ್ಯೊಟ್ಟು, ಶಕುಂತಳಾ ದೇವಾಡಿಗ, ಕಾರ್ಯದರ್ಶಿ ದೇವಿಪ್ರಸಾದ್ ಬೊಳ್ಯೊಟ್ಟು, ಮಾರ್ಗದರ್ಶಕ ರಾಘವೇಂದ್ರ ರಾವ್ ಎಲ್ಲೂರು ಮತ್ತಿತರರು ಭಾಗವಹಿಸಿದ್ದರು.