ಮಹಾನಗರ : ಬೋಳೂರು ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಕಾರ್ತಿಕ ಹುಣ್ಣಿಮೆ, ಅಮ್ಮನವರ ಜನ್ಮ ನಕ್ಷತ್ರ ಕೃತ್ತಿಕಾ ಪ್ರಯುಕ್ತ ವಿಶೇಷ ಜ್ಯೋತಿ ಪೂಜೆ, ದೀಪೋತ್ಸವ ಮತ್ತು ಭಗವತಿ ಸೇವೆ ಜರಗಿತು.
ಬ್ರಹ್ಮಚಾರಿ ರತೀಶ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಅಮೃತ ವಿದ್ಯಾಲಯದಲ್ಲಿ ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ಉಪಸ್ಥಿತಿಯಲ್ಲಿ ಶಕ್ತಿ ನಗರದ “ಸಾನ್ನಿಧ್ಯ’ ಸಂಸ್ಥೆಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ “ಭಕ್ತ ಪ್ರಹ್ಲಾದ’ ಯಕ್ಷಗಾನ ಪ್ರದರ್ಶನ ನಡೆಯಿತು.
ಮಾಧವ ಸುವರ್ಣ ದಂಪತಿ, ಡಾ| ಜೀವರಾಜ್ ದಂಪತಿ ಮತ್ತು ಮಂಜು ನಾಥ ಭಂಡಾರಿ ದಂಪತಿಗಳು ಬ್ರಹ್ಮ ಚಾರಿಣಿ ಮಂಗಳಾಮೃತ ಚೈತನ್ಯರ ಆಶೀರ್ವಾದದೊಂದಿಗೆ ಸಾನ್ನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ| ವಸಂತ ಕುಮಾರ್ ಶೆಟ್ಟಿ ಮತ್ತು ಉಷಾ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿದರು.
ಈ ಸಂದರ್ಭ ಸೇವಾ ಸಮಿತಿಯ ಪದಾ ಧಿಕಾರಿಗಳು, ರೋಟರಿ ಕ್ಲಬ್ನ ಪದಾಧಿಕಾರಿಗಳು, ನೇಶನಲ್ ಇನ್ಸುರೆನ್ಸ್ ಕಂಪೆನಿಯ ಅಧಿಕಾರಿಗಳು, ಸಿಬಂದಿ ವರ್ಗ ಮತ್ತು ಅಮ್ಮನವರ ಭಕ್ತರು, ಸಾರ್ವಜನಿಕರು ಭಾಗವಹಿಸಿದ್ದರು. ಪ್ರೊ| ರಾಧಾಕೃಷ್ಣ ವಂದಿಸಿದರು. ಡಾ| ದೇವದಾಸ್ ನಿರೂಪಿಸಿದರು