Home ಧಾರ್ಮಿಕ ಸುದ್ದಿ ಬೊಳಿಕಲ ಶ್ರೀ ಸುಬ್ರಹ್ಮಣ್ಯ ಮಠ: ಜೀರ್ಣೋದ್ಧಾರ ಸಮಿತಿ ಸಭೆ

ಬೊಳಿಕಲ ಶ್ರೀ ಸುಬ್ರಹ್ಮಣ್ಯ ಮಠ: ಜೀರ್ಣೋದ್ಧಾರ ಸಮಿತಿ ಸಭೆ

1329
0
SHARE
ಸುಬ್ರಹ್ಮಣ್ಯ ಮಠದ ಜೀರ್ಣೋದ್ಧಾರ ಸಮಿತಿ ಸಭೆ ನಡೆಯಿತು.

ಸವಣೂರು: ಅಂಕತ್ತಡ್ಕ ಸಮೀಪದ ಬೊಳಿಕಲ ಶ್ರೀ ಸುಬ್ರಹ್ಮಣ್ಯ ಮಠದ ಜೀರ್ಣೋದ್ಧಾರ ಸಮಿತಿ ಸಭೆ ಮಾಡಾವು ಅಯ್ಯಪ್ಪ ಭಜನ ಮಂದಿರದಲ್ಲಿ ನಡೆಯಿತು.

ಬೊಳಿಕಲ ಮಠ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್‌ನ ನೋಂದಾವಣೆ ಕುರಿತು ಬೈಲಾವನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಳ್ಳಲಾಯಿತು.

ಮುಂದಿನ ದಿನಗಳಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಜೀರ್ಣೋದ್ಧಾರ ಕುರಿತು ವಾಸ್ತು ಶಿಲ್ಪಿಗಳನ್ನು ಆಹ್ವಾನಿಸಿ, ಸ್ಥಳದ ವ್ಯಾಪ್ತಿ ಗುರುತು ಮಾಡಿ ಇತರ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿ ನಿರ್ಧರಿಸಲಾಯಿತು.

ಬೊಳಿಕಲ ಶ್ರೀ ಸುಬ್ರಹ್ಮಣ್ಯ ಮಠದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ರೈ ಬೊಳಿಕಲ ಮಠ, ಕಾರ್ಯದರ್ಶಿ ಚಿದಾನಂದ ರೈ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಶಿಧರ ರಾವ್‌ ಬೊಳಿಕಲ, ಕಾರ್ಯಾಧ್ಯಕ್ಷ ಮೋಹನ್‌ ರೈ ಬೇರಿಕೆ, ಅಧ್ಯಕ್ಷ ಮೋಹನ್‌ದಾಸ್‌ ರೈ ಬಲ್ಕಾಡಿ, ಕೋಶಾಧಿಕಾರಿ ಸುಬ್ರಹ್ಮಣ್ಯ ರೈ, ಕಾರ್ಯದರ್ಶಿ ಭಾಸ್ಕರ ರೈ ಮಠ, ಆರ್ಥಿಕ ಸಮಿತಿ ಕಾರ್ಯದರ್ಶಿ ಬಿ. ಸುಬ್ರಾಯ ಗೌಡ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಂಜಪ್ಪ ರೈ ಪೆರುವಾಜೆ, ಗಣೇಶ್‌ ರೈ ಕೆಯ್ಯೂರು, ಸಂಜೀವ ರೈ ಬೊಳಿಕಲ ಮಠ, ಚಂದ್ರಹಾಸ ರೈ ಬೊಳಿಕಲ ಮಠ, ರೋಹಿತಾಕ್ಷ ರೈ ಬೊಳಿಕಲ ಮಠ, ಚಂದ್ರಶೇಖರ ರೈ ನೆಲ್ಯಾಜೆ, ರವೀಂದ್ರ ರೈ ನೆಲ್ಯಾಜೆ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಲೋಕನಾಥ ಭಂಡಾರಿ, ದಿವಾಕರ ರೈ ನೆಲ್ಯಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here