ಬ್ರಹ್ಮಾವರ : ಇತಿಹಾಸ ಪ್ರಸಿದ್ಧ ಸೂರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಜೀರ್ಣಾವಸ್ಥೆಯಲಿದ್ದು, ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ಸೂರಾಲು ಅರಮನೆ ಕುಟುಂಬಸ್ಥರು ಹಾಗೂ 8 ಮಾಗಣೆ ಗ್ರಾಮಸ್ಥರ ವತಿಯಿಂದ ಭೂಮಿಪೂಜೆ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಜೀಣೋದ್ಧಾರ ಸಮಿತಿ ಗೌರವ ಅಧ್ಯಕ್ಷ, ಅನುವಂಶಿಕ ಆಡಳಿತ ಮೊಕ್ತೇಸರ ಸುದರ್ಶನ ಶೆಟ್ಟಿ, ಪದ್ಮಿನಿ ಸುದರ್ಶನ್ ಶೆಟ್ಟಿ, ವೇ| ಮೂ| ದೇವಿಪ್ರಸಾದ್ ಭಟ್, ಸೂರಾಲು ಅರಮನೆ ಕುಟುಂಬಸ್ಥರು, ಅರ್ಚಕ ವೃಂದದವರು, 8 ಮಾಗಣೆ ಗ್ರಾಮಸ್ಥರು, ಶ್ರೀ ಮಹಾಲಿಂಗೇಶ್ವರ ಫ್ರೆಂಡ್ಸ್ನ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಡಿ.7ರಂದು ಅಪರಾಹ್ನ 3 ಗಂಟೆಗೆ ಜೀರ್ಣೋದ್ಧಾರದ ಮುಂದಿನ ಕಾರ್ಯಕ್ರಮದ ಬಗ್ಗೆ ದೇವಸ್ಥಾನದಲ್ಲಿ ಸಾರ್ವಜನಿಕ ಭಕ್ತಾದಿಗಳ ಸಭೆಯನ್ನು ಕರೆಯಲಾಗಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಸುದರ್ಶನ ಶೆಟ್ಟಿ ತಿಳಿಸಿದ್ದಾರೆ.