Home ಧಾರ್ಮಿಕ ಸುದ್ದಿ ಜೂ.19-24: ಶ್ರೀ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶ

ಜೂ.19-24: ಶ್ರೀ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶ

ಹೆರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

2153
0
SHARE

ಬ್ರಹ್ಮಾವರ: ಹೆರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೂ.19ರಿಂದ 24ರ ವರೆಗೆ ನೂತನ ಶಿಲಾಮಯ ಗರ್ಭಗುಡಿ, ಗಣಪತಿ ಗುಡಿ, ದುರ್ಗಾಪರಮೇಶ್ವರಿ ಗುಡಿ, ಸುತ್ತು ಪೌಳಿ, ರಾಜಗೋಪುರ, ಓಲಗ ಮಂಟಪ, ಮಾರಿಗುಡಿ, ದೀಪದ ಕಟ್ಟೆ ಸಮರ್ಪಣೆ, ಅಷ್ಟಬಂಧ ಸಹಿತ ಶ್ರೀ ದೇವರ ಪುನರ್‌ ಪ್ರತಿಷ್ಠೆ, ದ್ರವ್ಯ ಕಲಶ ಸಹಿತ ಬ್ರಹ್ಮಕಲಶೋತ್ಸವ ಜರಗಲಿದೆ.

ಜೂ.19ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4ಕ್ಕೆ ಬ್ರಹ್ಮಾವರ ಬಂಟರ ಭವನದಿಂದ ಹೊರೆಕಾಣಿಕೆ, ಪುರ ಮೆರವಣಿಗೆ, ರಾತ್ರಿ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಜೂ.20ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನ ಕಾರ್ಯಕ್ರಮ ಜರಗಲಿದೆ.

ಜೂ.21: ಪ್ರತಿಷ್ಠೆ
ಜೂ.21ರಂದು ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವರ ನೂತನ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪರಿವಾರ ದೇವರುಗಳ ಬಿಂಬ ಪ್ರತಿಷ್ಠೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಮಾತೃ ಸಂಗಮ ಮಹಿಳಾ ಸಮಾವೇಶ, ರಾತ್ರಿ ಮಹಿಳಾ ಯಕ್ಷಗಾನ ಹಾಗೂ ಜೂ.22ರಂದು ಬೆಳಗ್ಗೆ ಧಾರ್ಮಿಕ ವಿಧಿವಿಧಾನ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಹರಿಕಥೆ ನಡೆಯಲಿದೆ. ಜೂ.23ರಂದು ಬೆಳಗ್ಗೆ ಶತರುದ್ರಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಸಭೆ, ರಾತ್ರಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಜೂ.24: ಬ್ರಹ್ಮಕಲಶ
ಜೂ.24ರಂದು ಬೆಳಗ್ಗೆ 505 ಪರಿಕಲಶಗಳ ಅಭಿಷೇಕ ಸಹಿತ ಬ್ರಹ್ಮಕುಂಭಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಸಭೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಚ್‌. ಸುಧಾಕರ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್‌. ಕೃಷ್ಣ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್‌ ಶೆಟ್ಟಿ, ಆಡಳಿತಾಧಿಕಾರಿ ಎಚ್‌. ಗಣೇಶ್‌ ರಾವ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here