Home ಧಾರ್ಮಿಕ ಸುದ್ದಿ ಎ.27-30: ಸಮರ್ಪಣೆ, ಪ್ರತಿಷ್ಠೆ, ಬ್ರಹ್ಮಕಲಶ

ಎ.27-30: ಸಮರ್ಪಣೆ, ಪ್ರತಿಷ್ಠೆ, ಬ್ರಹ್ಮಕಲಶ

ಉಪ್ಪೂರು ಶ್ರೀ ಗದ್ದಿಗೆ ದುರ್ಗಾಪರಮೇಶ್ವರೀ ದೇವಸ್ಥಾನ

2571
0
SHARE

ಬ್ರಹ್ಮಾವರ: ಉಪ್ಪೂರು ತೆಂಕಬೆಟ್ಟು ಶ್ರೀ ಗದ್ದಿಗೆ ದುರ್ಗಾ ಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಎ.27ರಿಂದ 30ರ ವರೆಗೆ ನವೀಕೃತ ಗರ್ಭಗುಡಿ, ನೂತನ ಹೊರಾಂಗಣದ
ಮೇಲ್ಛಾವಣಿ, ಪಾಕಶಾಲೆ , ಅಶ್ವತ್ಥಕಟ್ಟೆ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಜರಗಲಿದೆ.

ಎ.27ರಂದು ಅಪರಾಹ್ನ 3ರಿಂದ ಜಾತಬೆಟ್ಟು ಚಿತ್ತಾರಿ ಶ್ರೀ ಮಹಾಬಲೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ. ಎ.28, 29ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಎ.30ರಂದು ಬೆಳಗ್ಗೆ ಬಿಂಬ ಪ್ರತಿಷ್ಠೆ,  ಹ್ಮಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭೆ
ಎ.30ರಂದು ಸಂಜೆ 7.30ರಿಂದ ಜರಗುವ ಧಾರ್ಮಿಕ ಸಭೆಯಲ್ಲಿ ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಬೈಲೂರು ರಾಮಕೃಷ್ಣ ಆಶ್ರಮದ ವಿನಾಯಕಾನಂದಜೀ ಮಹಾರಾಜ್‌ ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಭಕ್ತಿಭಾವ ಗಾಯನ, ಯಕ್ಷಗಾನ ಬಯಲಾಟ ಜರಗಲಿದೆ.

LEAVE A REPLY

Please enter your comment!
Please enter your name here