Home ಧಾರ್ಮಿಕ ಕಾರ್ಯಕ್ರಮ ಬಾರಕೂರು ನಾಗಮಂಡಲ: ಹೊರೆಕಾಣಿಕೆ ಸಮರ್ಪಣೆ

ಬಾರಕೂರು ನಾಗಮಂಡಲ: ಹೊರೆಕಾಣಿಕೆ ಸಮರ್ಪಣೆ

284
0
SHARE

ಬ್ರಹ್ಮಾವರ: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾದ ಬಾರಕೂರು ಮೂಡುಕೇರಿ ಶ್ರೀ ವೇಣುಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಹಾಗೂ ಅಷ್ಟಬಂಧ ಸಹಿತ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಆಶ್ರಯದಲ್ಲಿ ಮೇ 1ರಂದು ಜರಗುವ ಅಷ್ಟಬಂಧ ಸಹಿತ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ರವಿವಾರ ಹೊರೆಕಾಣಿಕೆ ಸಮರ್ಪಣೆ ಜರಗಿತು.

ಸಮಾಜದ ಬೇರೆ-ಬೇರೆ ಕಡೆಗಳಲ್ಲಿ ನೆಲೆಸಿರುವ ಗಾಣಿಗ ಸಮಾಜದವರು ಹಾಗೂ ಊರಿನವರೊಂದಿಗೆ ಹೊರೆಕಾಣಿಕೆ ಮೆರವಣಿಗೆ ಬ್ರಹ್ಮಾವರದಿಂದ ಹೊರಟು ಬಾರಕೂರು ರಾಜಬೀದಿಯ ಮೂಲಕ ದೇಗುಲ ತಲುಪಿತು. ಅನಂತರ ಉಡುಪಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರಿಂದ ಆಶೀರ್ವರ್ಚನ ನೆರವೇರಿತು.

ಸಮಿತಿಯ ಪದಾಧಿಕಾರಿಗಳಾದ ಕೆ. ಗೋಪಾಲ, ಬಿ.ಎಸ್‌. ಮಂಜುನಾಥ, ಗೋಪಾಲ ಗಾಣಿಗ ಚಲ್ಲೆಮಕ್ಕಿ, ಸೂರ್ಯನಾರಾಯಣ ಗಾಣಿಗ ಮಟಪಾಡಿ, ವಾಸುದೇವ ಬೈಕಾಡಿ, ನಾಗರಾಜ ಗಾಣಿಗ ಸಾಲಿಗ್ರಾಮ ಅವರ ಉಸ್ತುವಾರಿಯಲ್ಲಿ ನಡೆಯಿತು. ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ವಿವಿಧ ಕಡೆಗಳಿಂದ ಆಗಮಿಸಿದ ಸಮಾಜದ ಗಣ್ಯರು, ಪ್ರಮುಖರು ಪಾಲ್ಗೊಂಡಿದ್ದರು.

ಎ.29ರಂದು ಬೆಳಗ್ಗೆ 4ರಿಂದ ವೇಣುಗೋಪಾಲಕೃಷ್ಣ ದೇವರ ಸಹಿತ ಪರಿವಾರ ದೇವರಿಗೆ ಅಷ್ಟಬಂಧ ಪ್ರತಿಷ್ಠೆ, ಜೀವಕುಂಭಾಭಿಷೇಕ, ಸಂಜೆ ನಾಗಮಂಡಲ ಚಪ್ಪರ ಪೂಜೆ ಹಾಗೂ ಎ.30ರಂದು ಬ್ರಹ್ಮಕಲಶ ಮಂಡಲ ರಚನೆ, ವಿಶೇಷ ಭಜನೆ ನಡೆಯಲಿದೆ.

ಮೇ 1ರಂದು ಬ್ರಹ್ಮಕಲಶ, ನಾಗಮಂಡಲ,ಅನ್ನಸಂತಪಣೆ
ಮೇ 1ರಂದು ಬೆಳಗ್ಗೆ ವಿವಿಧ ಹೋಮ ಹಾಗೂ ಬೆಳಗ್ಗೆ 10.25ಕ್ಕೆ ವೇಣುಗೋಪಾಲಕೃಷ್ಣ ಹಾಗೂ ಪರಿವಾರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಅಪರಾಹ್ನ 1ರಿಂದ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ದೀಪಾರಾಧನೆ, ರಂಗಪೂಜೆ, ಅಷ್ಟಾವಧಾನ ಸೇವೆ, 9ರಿಂದ ನಾಗದೇವರ ಸನ್ನಿಧಿಯಲ್ಲಿ ದೀಪಾರಾಧನೆ, ರಾತ್ರಿ 11ರಿಂದ ಅಷ್ಟಪವಿತ್ರ ನಾಗಮಂಡಲ, ಬೆಳಗ್ಗೆ 4.30ರಿಂದ ನಾಗಮಂಡಲ ಪ್ರಸಾದ ವಿತರಣೆ ನಡೆಯಲಿದೆ. ಈ ಪ್ರಯುಕ್ತ ಎ.30 ಹಾಗೂ ಮೇ 1ರಂದು ಸಂಜೆ 4ಗಂಟೆಗೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ

LEAVE A REPLY

Please enter your comment!
Please enter your name here