ಬ್ರಹ್ಮಾವರ: ಉಪ್ಪೂರು ತೆಂಕಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜೂ.13 ಮತ್ತು 14ರಂದು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ, ಕಲಶಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ಜರಗಲಿದೆ.
ಜೂ.13ರ ಅಪರಾಹ್ನ ಹೊರೆಕಾಣಿಕೆ ಮೆರವಣಿಗೆ, ಸಂಜೆ 6ರಿಂದ ಪ್ರಾರ್ಥನೆ, ಗೇಹ ಪ್ರತಿಗೃಹ, ಪ್ರಾಸಾದ ಶುದ್ಧಿ, ವಾಸ್ತುಪೂಜೆ, ಬಲಿ ಪ್ರತಿಷ್ಠಾಯಾಗ, ಬಿಂಬ ಶುದ್ಧಿ, ಅಧಿವಾಸ ಪೂಜೆ ಜರಗಲಿದೆ. ಜೂ.14ರ ಬೆಳಗ್ಗೆ 7.30ರಿಂದ ಪ್ರತಿಷ್ಠೆ, ಕಲಶ ಪ್ರತಿಷ್ಠೆ, ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಸೇವೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ಜರಗಲಿದೆ.
ಮಧ್ಯಾಹ್ನ 1ರಿಂದ 5ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಬಬ್ಬುಸ್ವಾಮಿ ಚರಿತ್ರೆ ಆಧಾರಿತ ತುಳು ನೃತ್ಯ ರೂಪಕ ಮೈಮೆದ ಬಬ್ಬುಸ್ವಾಮಿ ಪ್ರದರ್ಶನಗೊಳ್ಳಲಿದೆ.
ಧಾರ್ಮಿಕ ಸಭೆ
ಜೂ.14ರ ಸಂಜೆ 5 ಗಂಟೆಗೆ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕೇಶ್ ಜೆ. ಮೆಂಡನ್ ವಹಿಸುವರು. ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸುವರು. ಬಾರಕೂರು ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಧಾರ್ಮಿಕ ಉಪನ್ಯಾಸ ನೀಡುವರು.ಪ್ರಮುಖರಾದ ಪ್ರಮೋದ್ ಮಧ್ವರಾಜ್, ವೇದಮೂರ್ತಿ ವಿದ್ವಾನ್ ರಾಘವೇಂದ್ರ ಭಟ್, ಆರತಿ ಉಪ್ಪೂರು, ಮೋಹನ್ದಾಸ್ ಎಸ್. ಶೆಟ್ಟಿ, ರತ್ನಾಕರ್ ಡಿ. ಶೆಟ್ಟಿ , ರವೀಂದ್ರ ರಾವ್, ಅಮ್ಮುಂಜೆ ಕೃಷ್ಣ ನಾಯಕ್, ದಿನೇಶ್ ಎಚ್., ರವೀಂದ್ರ ಗುರಿಕಾರ, ಕೆ. ಗುರುರಾಜ್ ಆಚಾರ್ಯ ಉಪಸ್ಥಿತರಿರುವರು.