ಕಾಪು: ಇನ್ನಂಜೆ ಗ್ರಾಮದ ಮಡುಂಬು ಬೆರ್ಮೊಟ್ಟು ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಭದ್ರಕಾಳೀ ದೇವಸ್ಥಾನದ ವಾರ್ಷಿಕ ಮಹೋತ್ಸವವು ಮೇ 1ರಿಂದ ಮೊದಲ್ಗೊಂಡು ಮೇ 4ರವರೆಗೆ ಜರಗಲಿದೆ.
ಮೇ 1ರಂದು ಬೆಳಗ್ಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಧ್ವಜಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 8.00ರಿಂದ ಬೈಗಿನ ಬಲಿ ಪ್ರಾರಂಭ, ಮಹಾ ರಂಗಪೂಜೆ, ಶ್ರೀ ಭೂತಬಲಿ ನಡೆಯಲಿದೆ.
ಮೇ 2ರಂದು ಪೂರ್ವಾಹ್ನ 11.00ರಿಂದ ಮಹಾಪೂಜೆ, ರಥಾರೋಹಣ, ಮಹಾ ಅನ್ನಸಂತರ್ಪಣೆ, ರಾತ್ರಿ ಮನ್ಮಹಾರಥೋತ್ಸವ, ಬ್ರಹ್ಮರ ದರ್ಶನ, ಮೇ 3ರಂದು ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ ವಸಂತ ಪೂಜೆ, ಕಟ್ಟೆ ಪೂಜೆ, ಓಕುಳಿ ಅವಭೃತ ಸ್ನಾನ, ಧ್ವಜಾವರೋಹಣ, ರಾತ್ರಿ 8.00ರಿಂದ ಭದ್ರಕಾಳಿ ದೇವಿ ಪೂಜೆ, ಮೇ 4ರಂದು ಬೆಳಗ್ಗೆ ಮಹಾ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.