ಬ್ರಹ್ಮಾವರ: ಕಲ್ಯಾಣಪುರ ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಎ.27ರಿಂದ ಮೇ 6ರ ವರೆಗೆ ಜರಗುವ ನವೀಕೃತ ಶಿಲಾಮಯ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ, ಬ್ರಹ್ಮಕಲಶ, ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ ಜರಗಿತು.
ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ಪುತ್ತೂರು ದೇಗುಲದ ಅನುವಂಶಿಯ ಆಡಳಿತ ಮೊಕ್ತೇಸರ ಪಿ. ರಾಮ ಭಟ್ ಚಾಲನೆ ನೀಡಿದರು.
ಚೆಂಡೆ ಬಳಗ, ನಾಸಿಕ್ ಬ್ಯಾಂಡ್, ಭಜನೆ ತಂಡ, ವಿವಿಧ ವೇಷಗಳು ಮೆರುಗು ನೀಡಿದವು. 150ಕ್ಕೂ ವಾಹನಗಳಲ್ಲಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಸುಮಾರು 2,500 ಭಕ್ತಾದಿಗಳು ಪಾಲ್ಗೊಂಡರು.