Home ಧಾರ್ಮಿಕ ಸುದ್ದಿ ಬಂಟ್ವಾಳ: ಇಂದು ಪಾಪೆಬಂಡಿ ಮೆರವಣಿಗೆ

ಬಂಟ್ವಾಳ: ಇಂದು ಪಾಪೆಬಂಡಿ ಮೆರವಣಿಗೆ

1253
0
SHARE

ಬಂಟ್ವಾಳ : ಇತಿಹಾಸ ಪ್ರಸಿದ್ಧ ಬಂಟ್ವಾಳ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ಶ್ರೀ ವೈದ್ಯನಾಥ ದೈವದ ಪಾಪೆಬಂಡಿ ನಿರ್ಮಾಣವಾಗಿದ್ದು, ಮಾ. 30ರಂದು ಕ್ಷೇತ್ರಕ್ಕೆ ಒಪ್ಪಿಸುವ ವೈಭವದ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಗಣೇಶ ಸುವರ್ಣ ತುಂಬೆ ತಿಳಿಸಿದ್ದಾರೆ.
ಕಾಷ್ಠಶಿಲ್ಪಿ ಕಾರ್ಕಳ ಪದ್ಮನಾಭ ಅಚಾರ್ಯ ನೇತೃತ್ವದಲ್ಲಿ ಕಳೆದ ಡಿಸೆಂ ಬರ್‌ ತಿಂಗಳಲ್ಲಿ ನಿರ್ಮಾಣಕ್ಕೆ ವೀಳ್ಯ ನೀಡ ಲಾಗಿದ್ದು, ಮೂರು ತಿಂಗಳ ಅವಧಿಯಲ್ಲಿ ಅದರ ಕೆತ್ತನೆ ಕೆಲಸಗಳು ಮುಗಿದಿವೆ.

ಸುಮಾರು 21 ಲಕ್ಷ ರೂ. ವೆಚ್ಚದಲ್ಲಿ ಪಾಪೆ ಬಂಡಿಯನ್ನು ಹೆಬ್ಬಲಸು ಮತ್ತು ಬೋಗಿ ಮರದಿಂದ ನಿರ್ಮಾಣ ಮಾಡಲಾಗಿದೆ. ಶ್ರೀ ವೈದ್ಯನಾಥ ದೈವದ ಮೂರ್ತಿಯನ್ನು ಕುದುರೆಯ ಕುಳಿತು ಸವಾರಿ ಮಾಡುವ ರೀತಿಯಲ್ಲಿ ಕೆತ್ತಲಾಗಿದೆ.

ಪಾಪೆಬಂಡಿಗೆ ಮರದ ನಾಲ್ಕು ಚಕ್ರಗಳನ್ನು ಜೋಡಿಸಿದ್ದು, ರಥದ ಮಾದರಿ ಯಲ್ಲಿ ವಿವಿಧ ಕುಸುರಿ ಕೆಲಸಗಳಿಂದ ಆಕರ್ಷಣೀಯವಾಗಿ ರೂಪಿಸಲಾಗಿದೆ. ಇಡೀ ಬಂಡಿಯ ಚಕ್ರದ ತಳದಿಂದ ದೈವದ ಅಣಿಯ ತನಕ 12 ಅಡಿಗಳ ಎತ್ತರ ಹೊಂದಿದೆ. ಕುದುರೆಗೆ ಬಿಳಿ ಬಣ್ಣವನ್ನು, ದೈವಕ್ಕೆ ಪಾರಂಪರಿಕ ಕ್ರಮದ ಬಣ್ಣಗಾರಿಕೆ ಬಳಸಲಾಗಿದೆ.

ದೈವಸ್ಥಾನದಲ್ಲಿ ಈ ಹಿಂದೆ ಚಿಕ್ಕದಾದ ಅಂಗಣದ ಒಳಗೆ ಎಳೆಯುವ ಮರದ ಕುದುರೆ ಮಾತ್ರ ಇತ್ತು. ಈಗ ಪಾಪೆಬಂಡಿ ಯಲ್ಲಿ ದೈವದ ರೂಪವನ್ನು ಮರದಲ್ಲಿ ಕುದುರೆಯ ಮೇಲೆ ಕುಳಿತಿರುವಂತೆ ಕೆತ್ತನೆ ಮಾಡಿದೆ.

ಮೂಲದಲ್ಲಿ ಶ್ರೀ ವೈದ್ಯನಾಥ ದೈವಕ್ಕೆ ಪಾಪೆಬಂಡಿ ಸೇವೆ ನಡೆಯುತ್ತಿದ್ದು, ಶತಮಾನ ಪೂರ್ವದಲ್ಲಿ ನೇತ್ರಾವತಿ ನದಿಯ ನೆರೆ ನೀರಲ್ಲಿ ಪಾಪೆಬಂಡಿ ಕೊಚ್ಚಿ ಹೋಗಿದ್ದು, ದೈವದ ಅಭಯದಂತೆ ನೂತನ ಪಾಪೆಬಂಡಿ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು.

ಓಲಸರಿ ಸೇವೆ
ವೈದ್ಯನಾಥ ನೇಮದ ದಿನ, ವರ್ಷಕ್ಕೆ 1 ದಿನ ಎ. 3ರಂದು ಬಂಟ್ವಾಳ ಪೇಟೆಯಲ್ಲಿ ಗಡುವಾಡು ಸ್ಥಳದ ತನಕ ಪಾಪೆಬಂಡಿ ಓಲಸರಿ ಸೇವೆ ನಡೆಯುವುದು.

LEAVE A REPLY

Please enter your comment!
Please enter your name here