ಮಹಾನಗರ : ನಗರದ ಮಣ್ಣಗುಡ್ಡೆಯ ಶ್ರೀ ನವದುರ್ಗಾ ಮಹಾಗಣಪತಿ ದೇವಸ್ಥಾನದಲ್ಲಿ 11ನೇ ವರ್ಷದ ಅಹೋರಾತ್ರಿ ಏಕಾಹ ಭಜನೆ ಇತ್ತೀಚೆಗೆ ನಡೆಯಿತು.
ಜಿ. ಸತೀಶ್ ಭಟ್ ಮತ್ತು ಜಿ. ಕಾರ್ತಿಕ್ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ಉದ್ಘಾಟಿಸಿದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಗೋಕುಲ್ದಾಸ್ ನಾಯಕ್, ಏಕಾಹ ಭಜನ ಸಮಿತಿಯ ಅಧ್ಯಕ್ಷ ಟಿ. ವರದರಾಯ ಪ್ರಭು, ಉದ್ಯಮಿ ಕೇಶವ ಮಲ್ಯ, ಡಾ| ಮೋಹನ್ ಪೈ ಕಸ್ತೂರಿ, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಜಿ. ವಿಶ್ವನಾಥ ಭಟ್, ಎಂ. ರಘುರಾಮ ಕಾಮತ್, ಸುಧಾಕರ್ ರಾವ್ ಪೇಜಾವರ, ವೆಂಕಟೇಶ್ ರಾವ್, ಗೌರಿ ಶಂಕರ, ಎಂ. ಕೇಶವ ಪ್ರಭು, ಜಿ. ಗಣೇಶ್ ಭಟ್, ಜಿ. ಅಶ್ವಿನ್ ಭಟ್, ವಸಂತ್ ಶೇಟ್, ಯೋಗಿತಾ ಪ್ರಭು, ಸಕು ಶೆಣೈ, ದೀಪಾ ಪ್ರಭು, ಜಿ. ಭಾರತಿ ಭಟ್, ಜಿ. ಗಾಯತ್ರಿ ಭಟ್, ಜಿ. ಜ್ಯೋತಿ ಭಟ್, ರಂಜನಿ ನಾಗೇಶ್ ಮತ್ತು ಸಬಿತಾ ಪ್ರಭು ಉಪಸ್ಥಿತರಿದ್ದರು.