ಕಿನ್ನಿಗೋಳಿ: ಭಜನೆಯ ಮೂಲಕವಾಗಿ ಭಗವಂತನನ್ನು ಸುಲಭವಾಗಿ ಒಲಿಸಬಹುದು. ಪುರಂದರಾಸ, ಕನಕದಾಸರಂತಹ ಹಿರಿಯ ದಾಸ ಶ್ರೇಷ್ಠರು ಭಜನೆಯ ಮೂಲಕ ಭಗವಂತನನ್ನು ಕಂಡು ಜನರಿಗೆ ಸಂದೇಶ ನೀಡಿದ್ದಾರೆ ಎಂದು ಕಿನ್ನಿಗೋಳಿ ಜಿಎಸ್ಬಿ ಅಸೋಸಿಯೇಶನ್ ಟ್ರಸ್ಟ್ ಅಧ್ಯಕ್ಷ ಕೆ. ಅಚ್ಯುತ ಮಲ್ಯ ಹೇಳಿದರು.
ಅವರು ನ. 11 ರಂದು ಕಿನ್ನಿಗೋಳಿ ಶ್ರೀರಾಮ ಮಂದಿರದ 67ನೇ ನಗರ ಸಂಕೀರ್ತನೆಯ ಭಜನ ಮಂಗಲೋತ್ಸ ವವನ್ನು ಉದ್ಘಾಟಿಸಿದರು. ಪ್ರಧಾನ ಅರ್ಚಕ ವೇ| ಮೂ|
ಗಿರೀಶ್ ಭಟ್ ಮಾತನಾಡಿ, ಜಿಎಸ್ಬಿ ಸಮಾಜವು ಭಜನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಪೂರ್ವಿಕರು ಹಾಕಿಕೊಟ್ಟ ಆಚಾರ- ವಿಚಾರವನ್ನು ಮುಂದಿನ ಪೀಳಿಗೆಗೆ
ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಭಜನ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಪ್ರಭು, ಕೋಶಾಧಿಕಾರಿ ರಾಜೇಶ್ ನಾಯಕ್, ಸಮಿತಿಯ ಮುಕಂದ ನಾಯಕ್, ರಾಮನಾಥ್ ನಾಯಕ್, ಶ್ರೀನಿವಾಸ ಶೆಣೈ, ರಾಮದೇವ್ ಶೆಣೈ, ಕೆ. ಗಣೇಶ್ ಮಲ್ಯ, ವಾಸುದೇವ ಕಾಮತ್, ವಿನಾಯಕ್ ಶೆಣೈ, ಉಮೇಶ್ ಕಾಮತ್, ಮಹೇಶ್ ಕಾಮತ್, ಮಾತೃ
ಮಂಡಳಿಯ ಭಾರತೀ ಶೆಣೈ, ಉಪಾಧ್ಯಕ್ಷೆ ವಿಜಯಾ ಪ್ರಭು, ಕಾರ್ಯದರ್ಶಿ ರಂಜಿನಿ ರಾವ್ ಸದಸ್ಯರಾದ ವಾರಿಜಾ ಕಾಮತ್, ಸಂಧ್ಯಾ ಮಲ್ಯ, ಸೀಮಾ ಭಟ್, ರತ್ನಾಕರ ರಾವ್, ಅಚ್ಯುತ ಕುಡ್ವ, ಪ್ರವೀಣ್ ಕುಡ್ವ, ಗೋವಿಂದರಾಯ್ ಶೆಣೈ, ರಘುವೀರ ಕಾಮತ್, ಅನಂತ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.